ಉಚಲ್ಯಾ ನಾಟಕ

Author : ಡಿ.ಎಸ್.ಚೌಗಲೆ

Pages 100

₹ 80.00




Year of Publication: 2011
Published by: ಸಿವಿಜಿ ಇಂಡಿಯಾ
Address: ಕಸ್ತೂರಬಾ ಭವನ, ಗಾಂಧಿ ಭವನ ಕ್ಯಾಂಪಸ್‌, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು.
Phone: 08022340799

Synopsys

ಲಕ್ಷ್ಮಣ ಗಾಯಕವಾಡ ಅವರ ಆತ್ಮಕತೆಯನ್ನು ಡಿ.ಎಸ್. ಚೌಗಲೆ ಅವರು ಕನ್ನಡಕ್ಕೆ ಅನುವಾದಿಸಿ ನಾಟಕಕ್ಕೆ ರೂಪಾಂತರಿಸಿದ್ದಾರೆ. ನಾಟಕದ ಆರಂಭ ಹಾಗೂ ಮುಕ್ತಾಯದ ದೃಶ್ಯಗಳು ಗಾಂಧಿ ಪುತ್ಥಳಿಯ ಸನ್ನಿಧಿಯಲ್ಲೇ ನಡೆಯುತ್ತವೆ. ನಿವೇದಕನೆಂಬ ನಾಟಕದ ಸೂತ್ರಧಾರ, ಗಾಂಧೀಜಿಯೊಂದಿಗೆ ಸ್ವಗತ ಸಂಭಾಷಣೆ ನಡೆಸುತ್ತಾನೆ, ನಾಟಕದ ಅರೆಪಾಲಿಗೂ ಮಿಗಿಲಾದ ಘಟನೆಗಳು ನಡೆಯುವುದು ಸಾರ್ವಜನಿಕ ಸ್ಥಳಗಳಲ್ಲಿ; ಸರ್ಕಲ್, ಬಾರ್, ಎಮ್ಮೆಲ್ಲೆ ಆಫೀಸ್ ಮುಂತಾದ ಜಾಗಗಳಲ್ಲಿ, ಹೀಗೆ ಒಂದು ಕುಟುಂಬದ ಕತೆಯೊಂದಿಗೇ ಸಾರ್ವಜನಿಕ ಜೀವನದಲ್ಲಾದ ಪಲ್ಲಟವನ್ನೂ ಈ ನಾಟಕ ಕಟ್ಟಿಕೊಡುತ್ತಿರುವುದು ಅರ್ಥಪೂರ್ಣವಾಗಿದೆ.

About the Author

ಡಿ.ಎಸ್.ಚೌಗಲೆ

ಸಮಕಾಲೀನ ಕನ್ನಡ ನಾಟಕಕಾರರಲ್ಲಿ ಡಿ. ಎಸ್. ಚೌಗಲೆ ಪ್ರಮುಖರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬೇಡಕಿಹಾಳದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಸದ್ಯ ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮಧ್ಯೆ ಅನುಸಂಧಾನವೊಂದನ್ನು ಸೃಷ್ಟಿಸಿರುವ ಇವರು ಎರಡೂ ಭಾಷೆಯ ಮೇಲೆ ಪ್ರಭುತ್ವ ಹೊಂದಿದವರು. ’ದಿಶಾಂತರ’, ‘ವಖಾರಿಧೂಸ’, ’ಕಸ್ತೂರಬಾ’, ’ಉಧ್ವಸ್ಥ’, ‘ಉಚಲ್ಯಾ’, ‘ತಮಾಶಾ’, ‘ಜನ ಮೆಚ್ಚಿದ ಅರಸು’, ‘ಡಿ.ಎಸ್.ಚೌಗಲೆ ಅವರ ಏಳು ನಾಟಕಗಳು’ ಇವು ಬಹುಚರ್ಚಿತ ನಾಟಕಗಳು.  1998ರಲ್ಲಿ ಮೈಸೂರಿನ ರಂಗಾಯಣ ಪ್ರಯೋಗಿಸಿದ ಇವರ ಅನುವಾದಿತ ನಾಟಕ ‘ಗಾಂಧಿ ವರ್ಸಸ್ ...

READ MORE

Related Books