ಹಿರಿಯ ಕಾದಂಬರಿಕಾರ ಬಿ. ಪುಟ್ಟಸ್ವಾಮಯ್ಯ ಅವರು ಬರೆದ ಐದು ಅಂಕದ ಒಂದು ನಾಟಕ-ಷಾಜಹಾನ್. ಬಂಗಾಳಿ ಲೇಖಕ ದ್ವಿಜೇಂದ್ರಲಾಲರಾಯ ಅವರಿಗೆ ಸೇರಿದ ಕೃತಿಯನ್ನು ಅನುಸರಿಸಿ ಬರೆದ ನಾಟಕವಿದು. ಮೊಗಲ್ ಸಾಮ್ರಾಟ್ ಷಾಜಹಾನ್, ಆತ ಮಕ್ಕಳಾದ ದಾರಾ, ಔರಂಗಜೇಬ, ಷೂಜಾ, ಔರಂಗಜೇಬನ ಪುತ್ರ ಮಹಮ್ಮದ್ ಸುಲ್ತಾನ, ಜಯಪುರದ ರಾಜ, ಯೋಧಪುರದ ರಾಜ, ಷಾಜಹಾನನ ಪುತ್ರಿ ಜಹನಾರಾ, ದಾರಾನ ಪತ್ನಿ ನಾದಿರಾ, ಮಗಳು ಜಹರತ್ ಉನ್ನೀಸಾ-ಈ ಪಾತ್ರಗಳ ಸುತ್ತ ನಾಟಕದ ವಸ್ತು ಸುತ್ತುತ್ತದೆ. ತನ್ನ ಸಹೋದರನನ್ನೇ (ದಾರಾ) ಕೊಲೆ ಮಾಡಿಸುವ ಔರಂಗಜೇಬ, ತಮ್ಮ ತಂದೆಗೆ ಅರಳುಮರಳು ಮಾಡಿ ರಾಜ್ಯವನ್ನು ಹೇಗೆ ತನ್ನ ವಶಕ್ಕೆ ಪಡೆಯುತ್ತಾನೆ ಎಂಬುದು ಇಲ್ಲಿಯ ವಸ್ತು.
©2024 Book Brahma Private Limited.