ನಮ್ಮೊಳಗೊಬ್ಬ ನಾಜೂಕಯ್ಯ, ಬದುಕ ಮನ್ನಿಸು ಪ್ರಭುವೆ, ಅಸ್ಪೋಟ

Author : ಟಿ.ಎನ್.ಸೀತಾರಾಮ್

Pages 220

₹ 120.00




Published by: ಅಂಕಿತ ಪುಸ್ತಕ
Address: #53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮೈನ್ ರೋಡ್, ಬಸವನಗುಡಿ ಬೆಂಗಳೂರು -560004

Synopsys

`ನಮ್ಮೊಳಗೊಬ್ಬ ನಾಜೂಕಯ್ಯ, ಬದುಕ ಮನ್ನಿಸು ಪ್ರಭುವೆ, ಅಸ್ಪೋಟ’ ಕೃತಿಯು ಟಿ.ಎನ್.ಸೀತಾರಾಮ್ ಅವರ ಮೂರು ನಾಟಕಗಳ ಸಂಕಲನವಾಗಿದೆ. ‘ಆಸ್ಫೋಟ’ ಮತ್ತು ‘ನಮ್ಮೊಳಗೊಬ್ಬ ನಾಜೂಕಯ್ಯ’ ವಿಶಿಷ್ಟ ಅರ್ಥದಲ್ಲಿ ಸಾಮಾಜಿಕ ಆಧುನಿಕ ನಾಟಕಗಳು ‘ಆಸ್ಟೋಟ’ ದಲ್ಲಿ ಇಂದಿನ ಭಾರತೀಯನ ಸೋಗಲಾಡಿತನದ ವಿರುದ್ಧ ಸಿಡಿದೆದ್ದಿದ್ದಾರೆ. ಇಲ್ಲಿಯ ಕೋಪ ಹರಿತವಾದ ವ್ಯಂಗ್ಯದ ನೆರವು ಪಡೆದು ವ್ಯಕ್ತವಾಗಿದೆ. ‘ನಮ್ಮೊಳಗೊಬ್ಬ ನಾಜೂಕಯ್ಯ’ದಲ್ಲಿ ಅನುಭವ ಹೆಚ್ಚು ಪಕ್ವವಾಗಿದೆ. ‘ಆಸ್ಪೋಟ’ದ ಕೋಪ ಇಲ್ಲಿ ನಾಯಕನ ವ್ಯಕ್ತಿತ್ವದ ವಿಶ್ಲೇಷಣೆಯಾಗಿ ಕಾಣಿಸಿಕೊಂಡಿದೆ. ಇವೆರಡು ನಾಟಕಗಳು ಸಮಕಾಲೀನ ಸಾಮಾಜಿಕ ರಾಜಕೀಯ ಪ್ರಶ್ನೆಗಳನ್ನು ಒಳಗೊಂಡಿದೆ. ಈ ನಾಟಕಗಳ ಕಳಕಳಿ ಮತ್ತು ಒಳತೋಟಿಯು ಸೀತಾರಾಮ್ ಅವರು ಶ್ರೇಷ್ಠ ನಾಟಕ ಬರೆಯುವ ಭರವಸೆ ನೀಡುತ್ತವೆ.

About the Author

ಟಿ.ಎನ್.ಸೀತಾರಾಮ್
(06 December 1948)

ಟಿ.ಎನ್.ಸೀತಾರಾಮ್ ಅವರು ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರದವರು.  ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು. ಲಂಕೇಶ್ ವಾರಪತ್ರಿಕೆಯಲ್ಲಿ ಬರಹಗಾರರಾಗಿದ್ದರು.  (ಚಲನಚಿತ್ರ) : ಕ್ರೌರ್ಯ, ಧರಣಿಮಂಡಲ ಮಧ್ಯದೊಳಗೆ, ಮತದಾನ, ಮೀರಾ ಮಾಧವ ರಾಘವ, ಮತದಾನ, ಪಲ್ಲವಿ. (ಕಿರುತೆರೆ ಧಾರವಾಹಿಗಳು) ಸಂಕಲನ, ಮಾಯಾಮೃಗ, ಮನ್ವಂತರ, ಮುಕ್ತ ಮಳೆಬಿಲ್ಲು, ಕಾಲೇಜು ರಂಗ, ಮುಖಾಮುಖಿ, ನಾವೆಲ್ಲರು ಒಂದೇ, (ಪತ್ತೇದಾರಿ) ಪ್ರಭಾಕರ್, ದಶಾವತಾರ, ಜ್ವಾಲಮುಖಿ, ಮುಕ್ತ ಮುಕ್ತ, ಮಹಾಪರ್ವ, ಮಗಳು ಜಾನಕಿ ಮೂಲಕ ಕನ್ನಡದ ದೃಶ್ಯ ಮಾಧ್ಯಮಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕೃತಿಗಳು : ನಮ್ಮೊಳಗೊಬ್ಬ ನಾಜೂಕಯ್ಯ, ಬದುಕ ಮನ್ನಿಸು ಪ್ರಭುವೇ, ಆಸ್ಪೋಟ (ಮೂರು ನಾಟಕಗಳು). ...

READ MORE

Related Books