About the Author

ಟಿ.ಎನ್.ಸೀತಾರಾಮ್ ಅವರು ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರದವರು.  ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು. ಲಂಕೇಶ್ ವಾರಪತ್ರಿಕೆಯಲ್ಲಿ ಬರಹಗಾರರಾಗಿದ್ದರು.  (ಚಲನಚಿತ್ರ) : ಕ್ರೌರ್ಯ, ಧರಣಿಮಂಡಲ ಮಧ್ಯದೊಳಗೆ, ಮತದಾನ, ಮೀರಾ ಮಾಧವ ರಾಘವ, ಮತದಾನ, ಪಲ್ಲವಿ. (ಕಿರುತೆರೆ ಧಾರವಾಹಿಗಳು) ಸಂಕಲನ, ಮಾಯಾಮೃಗ, ಮನ್ವಂತರ, ಮುಕ್ತ ಮಳೆಬಿಲ್ಲು, ಕಾಲೇಜು ರಂಗ, ಮುಖಾಮುಖಿ, ನಾವೆಲ್ಲರು ಒಂದೇ, (ಪತ್ತೇದಾರಿ) ಪ್ರಭಾಕರ್, ದಶಾವತಾರ, ಜ್ವಾಲಮುಖಿ, ಮುಕ್ತ ಮುಕ್ತ, ಮಹಾಪರ್ವ, ಮಗಳು ಜಾನಕಿ ಮೂಲಕ ಕನ್ನಡದ ದೃಶ್ಯ ಮಾಧ್ಯಮಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಕೃತಿಗಳು : ನಮ್ಮೊಳಗೊಬ್ಬ ನಾಜೂಕಯ್ಯ, ಬದುಕ ಮನ್ನಿಸು ಪ್ರಭುವೇ, ಆಸ್ಪೋಟ (ಮೂರು ನಾಟಕಗಳು).

ಪ್ರಶಸ್ತಿ-ಪುರಸ್ಕಾರಗಳು:  ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ,(48ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಂದರ್ಭ), ಶ್ರೇಷ್ಠ ನಿರ್ದೇಶಕ ಪ್ರಶಸ್ತಿ (2005ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಆರ್ಯಭಟ ಪ್ರಶಸ್ತಿಗಳಲ್ಲಿ ಮುಕ್ತ ಧಾರಾವಾಹಿಯ ನಿರ್ದೇಶನಕ್ಕೆ)

ಟಿ.ಎನ್.ಸೀತಾರಾಮ್

(06 Dec 1948)