ಮೈಲಾರ ಮಹಾದೇವ

Author : ಮನು ಬಳಿಗಾರ

Pages 56

₹ 40.00




Year of Publication: 2017
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009
Phone: 08040114455

Synopsys

ಡಾ. ಮನು ಬಳಿಗಾರ ಅವರು ಬರೆದ ನಾಟಕ-ಮೈಲಾರ ಮಹಾದೇವ. 2009 ಹಾಗೂ 2011 ರಲ್ಲಿ ಮುದ್ರಣ ಕಂಡ ಕೃತಿಯು ಹುತಾತ್ಮ ಮೈಲಾರ ಮಹಾದೇವರ ದೇಶಪ್ರೇಮ, ಚಳವಳಿಯಲ್ಲಿ ಪಾಲ್ಗೊಂಡ ಧೀರತನವನ್ನು, ಸಮಸ್ಯೆಗಳನ್ನು ಎದುರಿಸಿದ ರೀತಿಯನ್ನು ನಾಟಕದಲ್ಲಿ ತುಂಬಾ ಪ್ರಭಾವಶಾಲಿಯಾಗಿ ಬಿಂಬಿಸಿದ್ದಾರೆ. ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ರಂಗ ಸಾಹಿತ್ಯಕ ಅಂಶಗಳಿಂದ ಈ ಕೃತಿಯು ಓದುಗರನ್ನು ಸೆಳೆಯುತ್ತದೆ.

ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಕೆ.ವೈ. ನಾರಾಯಣ ಸ್ವಾಮಿ ಅವರು ‘ಚರಿತ್ರೆ, ಪುರಾಣ, ಸಾಂಸ್ಕೃತಿಕ ನಾಯಕರು ವಾರಸುದಾರರಿಲ್ಲದೆ ಗುರುತು ಕಳೆದುಕೊಂಡಿರುವ ಕಾಲಘಟ್ಟದಲ್ಲಿ ಲೇಖಕರ ಪ್ರಯತ್ನ ಕನ್ನಡದ ಮನಸ್ಸುಗಳನ್ನು ಮಹಾತ್ಮರ ಮಾರ್ಗದ ಕಡೆ ಸೆಳೆಯುವಂತೆ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ಮನು ಬಳಿಗಾರ
(01 June 1953)

ಮನು ಬಳಿಗಾರ ಅವರು ಗದಗದಲ್ಲಿ 1953 ಜೂನ್‌ 1ರಂದು ಗದಗದಲ್ಲಿ ಜನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಎಂ.ಎ, ಎಲ್‌ಎಲ್‌ಬಿ ಪದವಿ ಪಡೆದಿರುವ ಇವರು ಕರ್ನಾಟಕ ಸರ್ಕಾರದಲ್ಲಿ, ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ, ಕನ್ನಡ ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ ಹೀಗೆ ಹಲವಾರು ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ.  ಪ್ರವೃತ್ತಿಯಲ್ಲಿ ಬರಹಗಾರರಾಗಿರುವ ಇವರು ಕಥೆ, ಕವನ, ನಾಟಕ ಪ್ರಬಂಧ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ಹಲವು ಕೃತಿಗಳು ಪ್ರಕಟಗೊಂಡಿವೆ. ನನ್ನ ನಿನ್ನೊಳಗೆ, ಎದ್ದವರು ಬಿದ್ದವರು, ನಯಾಗರ ಮತ್ತು ಜಲಪಾತಗಳು (ಕವನ) ಅವ್ಯಕ್ತ: ಋಣ ...

READ MORE

Related Books