About the Author

ಮನು ಬಳಿಗಾರ ಅವರು ಗದಗದಲ್ಲಿ 1953 ಜೂನ್‌ 1ರಂದು ಗದಗದಲ್ಲಿ ಜನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಎಂ.ಎ, ಎಲ್‌ಎಲ್‌ಬಿ ಪದವಿ ಪಡೆದಿರುವ ಇವರು ಕರ್ನಾಟಕ ಸರ್ಕಾರದಲ್ಲಿ, ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ, ಕನ್ನಡ ಸಂಸ್ಕೃತಿ ಇಲಾಖೆಯ ಆಯುಕ್ತರಾಗಿ ಹೀಗೆ ಹಲವಾರು ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. 

ಪ್ರವೃತ್ತಿಯಲ್ಲಿ ಬರಹಗಾರರಾಗಿರುವ ಇವರು ಕಥೆ, ಕವನ, ನಾಟಕ ಪ್ರಬಂಧ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ಹಲವು ಕೃತಿಗಳು ಪ್ರಕಟಗೊಂಡಿವೆ. ನನ್ನ ನಿನ್ನೊಳಗೆ, ಎದ್ದವರು ಬಿದ್ದವರು, ನಯಾಗರ ಮತ್ತು ಜಲಪಾತಗಳು (ಕವನ) ಅವ್ಯಕ್ತ: ಋಣ (ಕಥಾ ಸಂಕಲನ) ಬಹುಮುಖಿ, ತಲಸ್ಪರ್ಶಿ, ಗಾನ ಗಂಧರ್ವ, ಅಕ್ಷರ ಮಿಲನ (ಸಂಪಾದನೆ) ಇವರ ಪ್ರಮುಖ ಕೃತಿಗಳು. ಇವರಿಗೆ ಬೆಳಗಾವಿ ಅಕ್ಷರ ಪ್ರಭಾ ಸಂಪಾದಕರಾಗಿದ್ದಾಗ ಸತ್ಯೇನ್ ಮೈತ್ರಿ ಪ್ರಶಸ್ತಿ, ರನ್ನ ಸಾಹಿತ್ಯ, ಗೊರೂರು ಸಾಹಿತ್ಯ, ಕೆಂಪೇಗೌಡ ಸಾಹಿತ್ಯ ಲಿಂಗರಾಜ ದೇಸಾಯಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. 

 

ಮನು ಬಳಿಗಾರ

(01 Jun 1953)

BY THE AUTHOR