ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಸಾಮಾಜಿಕ ನಾಟಕ ‘ಕರಿಮುಗಿಲ ಸರಿದಾಗ ಮತ್ತಿತರ ನಾಟಕಗಳು’. ಈಗಾಗಲೇ ಕಾದಂಬರಿಗಳನ್ನು ರಚಿಸಿದ ಲೇಖಕರು ಈಗ ನಾಟಕ ರಚಿಸಿದ್ದು, ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಖ್ಯಾತ ಸಾಹಿತಿ ನವರತ್ನರಾಮ್ ಅವರು ಕೃತಿಗೆ ಮುನ್ನುಡಿ ಬರೆದು ‘20ಕ್ಕೂ ಹೆಚ್ಚು ಪಾತ್ರಗಳಿದ್ದರೂ ಪ್ರತಿಯೊಬ್ಬನ ಪಾತ್ರವು ತನ್ನದೇ ಆದ ಜೀವಂತಿಕೆಯಿಂದ ಅರ್ಥವತ್ತಾಗಿ ನಿಲ್ಲುತ್ತವೆ ಮತ್ತು ನಾಟಕದ ಓಟಕ್ಕೆ ಪೂರಕವಾಗಿದೆ. ಉನ್ನತ ಆದರ್ಶಗಳನ್ನು ಕಾರ್ಯಗತ ಮಾಡಲು ಸಮಾಜದಲ್ಲಿ ಅಷ್ಟು ಸುಲಭವಲ್ಲ. ಇದನ್ನು ಅಹಿಂಸಾತ್ಮಕವಾಗಿ ಪ್ರತಿಭಟಿಸುವುದು ನಾಟಕದ ವಸ್ತು. ಕಂದಾಚಾರಗಳನ್ನು ಬದಿಗೊತ್ತಿ ನವ ಸಮಾಜದ ನಿರ್ಮಾಣದ ಆಶಯವೂ ಈ ನಾಟಕದ ವಸ್ತು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.