ತ.ರಾ.ಸು ಅವರು ’ಜ್ವಾಲಾ’ ನಾಟಕವು ಮೊದಲು 1951ರಲ್ಲಿ ಪ್ರಕಟಗೊಂಡಿತ್ತು. ಬಹುವರ್ಷಗಳ ನಂತರ 2013ರಲ್ಲಿ ದ್ವಿತೀಯ ಮುದ್ರಣ ಕಂಡಿದೆ. ನಾಟಕ ಮುದ್ರಣಗೊಳ್ಳುವ ಮುಂಚೆಯೇ ಮೈಸೂರು ಆಕಾಶವಾಣಿಯಿಂದ ಪ್ರಸಾರಗೊಂಡು ಈ ನಾಟಕವು ಜನಮೆಚ್ಚುಗೆ ಪಡೆದಿತ್ತು.
ನಾಟಕದ ಕಥಾವಸ್ತು ಮಹಾಭಾರತವೇ ಆಗಿದೆ. ಕೃಷ್ಣನು ಪಾಂಡವರ ಪಕ್ಷಪಾತಿ. ಆದರೆ, ಅಶ್ವಮೇಧ ಯಾಗದ ನೆಪದಲ್ಲಿ ಸಾಲು ಸಾಲು ಸಮರಗಳು. ಇಂತಹ ವೈರುಧ್ಯತೆಗಳಿಗೆ ಕಾರಣವೇನು? ಅಶ್ವಮೇಧ ಯಾಗದ ಮೂಲ ಉದ್ದೇಶವೇನು? ಬರೀ ಪ್ರಾಯಶ್ಚಿತವೇ? ಇಂಥಹ ಹತ್ತು ಹಲವು ಪ್ರಶ್ನೆಗಳು ಲೇಖಕರಿಗೆ ಕಾಡಿದ್ದರ ಫಲವೇ ’ಜ್ವಾಲಾ’; ನಾಟಕ ರೂಪು ತಳೆದಿದೆ. ಘಟನೆಗಳ ನಿರೂಪಣೆಯ ಶಿಸ್ತು, ವೀರ್ಯವತ್ತಾದ ಭಾಷೆಯಿಂದ ಜ್ವಾಲಾ ನಾಟಕವು ಸಾಹಿತ್ಯದ ಉತ್ತಮ ದೃಶ್ಯ ಕಾವ್ಯವಾಗಿದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE