ಜೇತವನ ಮತ್ತು ಭೂಮಿ ಹುಣ್ಣಿಮೆ ಹಾಡು

Author : ಸತ್ಯನಾರಾಯಣರಾವ್ ಅಣತಿ

Pages 116

₹ 40.00




Year of Publication: 1996
Published by: ಮನೋಹರ ಗ್ರಂಥ ಮಾಲಾ
Address: ಸುಭಾಸ ರಸ್ತೆ ಧಾರವಾಡ - 580 001
Phone: 083641822

Synopsys

ಲೇಖಕ ನಾರಾಯಣರಾವ್ ಅಣತಿ ಅವರ ನಾಟಕ ಕೃತಿ ‘ಜೇತವನ ಮತ್ತು ಭೂಮಿ ಹುಣ್ಣಿಮೆ ಹಾಡು’. ಕೃತಿಗೆ ಬೆನ್ನುಡಿ ಬರೆದ, ಎ. ಆರ್. ನಾಗಭೂಷಣ, ‘ಕವಿ ಮತ್ತು ನಾಟಕಕಾರರಾಗಿ ಅಣತಿಯವರು ನಿರಂತರವಾಗಿ ಮಾಗುತ್ತಿರುವುದಕ್ಕೆ 'ಜೇತವನ' ಮತ್ತು 'ಭೂಮಿ ಹುಣ್ಣಿಮೆ ಹಾಡು' ನಾಟಕಗಳು ಸಾಕ್ಷಿಯಾಗಿವೆ. ಜೀವನ ಪ್ರೀತಿ. ಅಂತ:ಕರಣಪೂರಿತ ಮನುಷ್ಯ ಸಂಬಂಧಗಳು ಮತ್ತು ಸಮಾನತೆ ಆಧಾರದ ಮೇಲೆ ನಿಲ್ಲುವ ಸಮಾಜವನ್ನು ಅಪೇಕ್ಷಿಸುವ ನೋಟಗಳು ಇವುಗಳಲ್ಲಿವೆ.  ಬುದ್ದನ ಜೀವನದರ್ಶನ ಹಿನ್ನೆಲೆಯಿರುವ 'ಜೇತವನ’ ಸ್ವಾರ್ಥ ರಾಜಕಾರಣದ ಸೋಲನ್ನು, ಪ್ರಭುತ್ವದ ಕೌರ್ಯದಲ್ಲಿ ಪ್ರೀತಿ ಅನುಕಂಪ ನಲುಗುವುದನ್ನು ತೋರಿಸುವ ನಾಟಕ ತೀವ್ರಗತಿಯಲ್ಲಿ ಸಾಗಿದರೂ ಅವಸರದ ನಿರ್ಣಯಗಳನ್ನು ಮಂಡಿಸುವುದಿಲ್ಲ. ಬದಲಾಗಿ, ಗಾಢವಾದ ವಿಷಾದವನ್ನು ಪ್ರಕಟಿಸುತ್ತದೆ. 'ಭೂಮಿ ಹುಣ್ಣಿಮೆ ಹಾಡು' ನಮ್ಮ ದೇಶದ ಹೋರಾಟದ ಪರಂಪರೆಯಲ್ಲಿ ಒಂದು ಜಲಚಿಹ್ನೆಯಾಗಿರುವ ಕಾಗೋಡು ಚಳವಳಿಯ ಸರಳ ನಾಟಕ ರೂಪ, ಜಡಗೊಂಡ ಸಮಾಜದ ಚಲನೆ ಸಾಧ್ಯವಾಗುವುದು ಶ್ರಮಜೀವಿಗಳಿಂದ ಮಾತ್ರ ಎಂಬ ನಿಲುವು: ಮಧ್ಯಮ ವರ್ಗದ ಬುದ್ದಿ ಜೀವಿಗಳ ದೌರ್ಬಲ್ಯಗಳು ಹಾಗೂ ಉಳ್ಳವರ ಕ್ರೌರ್ಯ ಇವುಗಳನ್ನು ಸಮಗ್ರವಾಗಿ ಕಾಣಿಸುತ್ತದೆ. ವಸ್ತುವಿನ ಸೂಕ್ಷ್ಮ ನಿರ್ವಹಣೆ ಮತ್ತು ರಂಗಪ್ರಜ್ಞೆ ಎಂಡೂ ಸಮರ್ಪಕವಾಗಿ ಬೆಸದುಕೊಂಡಿರುವ ಸಂವೇದನಾಶೀಲ ನಾಟಕಗಳಾಗಿವೆ.’ ಎಂದು ಪ್ರಶಂಸಿದ್ದಾರೆ.

About the Author

ಸತ್ಯನಾರಾಯಣರಾವ್ ಅಣತಿ
(12 December 1935)

ಕವಿ, ನಾಟಕಕಾರ ಕೆ. ಸತ್ಯನಾರಾಯಣರಾವ್ ಅಣತಿ ಅವರು ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದವರು. ತಂದೆ-ಎ.ಎನ್. ಮೂರ್ತಿರಾವ್, ತಾಯಿ-ಶ್ರೀಮತಿ ರತ್ನಮ್ಮ . 1935 ಡಿಸೆಂಬರ್ 12, ರಂದು ಜನಿಸಿದ ಅವರು ಹುಟ್ಟಿದ ಊರಾದ ಅಣತಿ, ತಿಪಟೂರು, ಹಾಸನ, ಬೆಂಗಳೂರು, ಧಾರವಾಡಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣರಾವ್ ಸಾಹಿತ್ಯಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದ ಹಲವು ವಿಭಾಗಳಲ್ಲಿ ಕೃಷಿಮಾಡಿದ್ದಾರೆ.  ಕೃತಿಗಳು: ನೀಲಕುರುಂಜಿ (ಆಯ್ದ ಕವಿತೆಗಳ ಸಂಕಲನ), ಪಾತ್ರಗಳು ಇರಲಿ ಗೆಳೆಯ, ತೆರಕೊಂಡ ಆಕಾಶ, ಕೃಷ್ಣ ಕಣ್ಣಿನ ನೋಟ, ಭೂಮಿ ಬದುಕಿನ ಗಂಧ, ...

READ MORE

Related Books