ಚಿತ್ರಪಟ ಅಗ್ನಿವರ್ಣ ಉರಿಯ ಉಯ್ಯಾಲೆ

Author : ಎಚ್. ಎಸ್. ವೆಂಕಟೇಶಮೂರ್ತಿ

Pages 120

₹ 40.00




Year of Publication: 2021
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಚಿತ್ರಪಟ ಅಗ್ನಿವರ್ಣ ಉರಿಯ ಉಯ್ಯಾಲೆ’ ಎಚ್. ಎಸ್. ವೆಂಕಟೇಶಮೂರ್ತಿಯವರ ನಾಟಕವಾಗಿದೆ. ಇದಕ್ಕೆ ಬಿ.ವಿ.ಕಾರಂತರ ಬೆನ್ನುಡಿ ಬರಹವಿದೆ; ಎಚ್. ಎಸ್. ವೆಂಕಟೇಶ ಮೂರ್ತಿಯವರ ಕವಿತೆಗಳೇ ಇರಲಿ, ನಾಟಕವೇ ಇರಲಿ, ಎರಡರಲ್ಲೂ ಸಹಜವಾದ ಒಂದು ಗುಣವಿದೆ. ಅದು ನಾಟಕ ಮತ್ತು ಕಾವ್ಯ ಸಹಜವಾಗಿ ಹೆಣೆದುಕೊಳ್ಳುವ ಗುಣ. ರಘುವಂಶವನ್ನು ಆಧರಿಸಿದ ಮೂರ್ತಿಯವರ ಅಗ್ನಿವರ್ಣ ರೂಪಾಂತರವಲ್ಲ ಪ್ರಕಾರಾಂತರ ಅದು ನಾಟಕ ಭಾಷೆಯಲ್ಲಿ ಒಂದು ಪರಕಾಯ ಪ್ರವೇಶ ಪ್ರಕ್ರಿಯೆ. ಹಾಗೆಯೇ ಉರಿಯ ಉಯ್ಯಾಲೆ, ರಂಗಭೂಮಿಯಲ್ಲಿ ಸ್ವಗತ ಎಷ್ಟು ಮಹತ್ವ ಪೂರ್ಣವಾದದ್ದು ಎಂಬುದನ್ನು ಮನವರಿಕೆ ಮಾಡಿಕೊಡುವ ಕೃತಿ. ಚಿತ್ರಪಟದಲ್ಲಿ ಮೂರ್ತಿಯವರ ಪಾತ್ರ, ಕಲ್ಪನೆ ಇನ್ನಷ್ಟು ಸಮೃದ್ಧವಾಗಿದೆ. ಇಲ್ಲಿ ರಾಮಾಯಣದ ಘಟನೆಗಳ ಕ್ರಮ ವ್ಯತ್ಯಯದಲ್ಲೇ ಒಂದು ತಾಜಾ ಅನುಭವವಿದೆ ಎಂಬುವುದನ್ನು ಈ ಕೃತಿಯಲ್ಲಿ ನೋಡಬಹುದು ಎಂದಿದ್ದಾರೆ. 

About the Author

ಎಚ್. ಎಸ್. ವೆಂಕಟೇಶಮೂರ್ತಿ
(23 June 1944)

ವೆಂಕಟೇಶ ಮೂರ್ತಿ ಅವರು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯಲ್ಲಿ ಮಧ್ಯಮವರ್ಗದ ಕುಟುಂಬವೊಂದರಲ್ಲಿ 23-06-1944ರಲ್ಲಿ ಜನಿಸಿದರು. ಮೂವತ್ತು ವರ್ಷಗಳ ಕಾಲ ಗ್ರಾಮ್ಯಜೀವನ ನಡೆಸಿ ನಂತರ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ 1973ರಲ್ಲಿ ನೇಮಕಗೊಂಡರು. 2000 ರಲ್ಲಿ ನಿವೃತ್ತರಾದ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾರಂಭದಲ್ಲಿ ಯಕ್ಷಗಾನ, ಬಯಲಾಟದಂಥ ರಂಗಪ್ರದರ್ಶನಗಳು ಇವರ ಮೇಲೆ ಗಾಢ ಪ್ರಭಾವ ಬೀರಿದವು. ಬಾಲ್ಯದಲ್ಲೇ ಕುಮಾರವ್ಯಾಸ, ಪುರಂದರ, ಲಕ್ಷ್ಮೀಶ ಮೊದಲಾದವರ ಕೃತಿಗಳ ನಿಕಟ ಸಂಪರ್ಕ ದೊರೆಯಿತು. ಮುಂದೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯ ಪರಂಪರೆಯೊಂದಿಗೆ ನಡೆಸಲಾದ ...

READ MORE

Related Books