‘ಅಭಿನವ ಚಾಪ್ಲಿನ್ ಮತ್ತೆರಡು ನಾಟಕಗಳು’ ಕೃತಿಯು ಎನ್.ಸಿ. ಮಹೇಶ್ ಅವರ ನಾಟಕಸಂಕಲನವಾಗಿದೆ. ಇಲ್ಲಿ ಲೇಖಕ ವಿಶ್ವ ಕಂಡ ಅದ್ಭುತ ನಗೆಗಾರ ಚಾಪ್ಲಿನ್ ಅವರ ವಿಚಾರಗಳನ್ನು ಕಟ್ಟಿಕೊಟ್ಟಿದ್ದಾರೆ. ಆತ ಕೇವಲ ನಗೆಗಾರನಲ್ಲದೇ ಅದ್ಭುತ ತತ್ವಶಾಸ್ತ್ರಜ್ಞ, ಹೋರಾಟಗಾರನೂ ಆಗಿದ್ದ ಎನ್ನುತ್ತಾರೆ. ಇನ್ನು ಮನುಷ್ಯ ಬದುಕಿನಲ್ಲಿ ಘಟಿಸುವ ಅನೇಕ ಸಂಗತಿಗಳನ್ನು ಆತ ತನ್ನದೇ ಲಘು ಲಹರಿಯಲ್ಲಿ ದಾಖಲಿಸುತ್ತಾ ಹೋಗುತ್ತಿದ್ದ. ಅವೆಲ್ಲವೂ ನಮ್ಮನ್ನು ಬಹುರೀತಿಯಲ್ಲಿ ಆವರಿಸುತ್ತಾ ಹೋಗುತ್ತದೆ. ಅಂತಹ ಹತ್ತು ಹಲವು ಝಲಕ್ ಗಳನ್ನು ಈ ಕೃತಿಯಲ್ಲಿ ರೂಪಿಸಲಾಗಿದೆ. ಹಾಗಾಗಿಯೇ ಇಲ್ಲಿನ ಸನ್ನಿವೇಶಗಳಿಗೆ ಹೊಸದೊಂದು ಆಯಾಮ ದಕ್ಕಿದೆ. ಒಂದಿಲ್ಲೊಂದು ಬಗೆಯಲ್ಲಿ ನಮ್ಮ ಬದುಕಿನ ಸಂಗತಿಗಳೇ ಇಲ್ಲಿ ಅನಾವರಣಗೊಳ್ಳುತ್ತಾ ಸಾಗಿವೆ. ಯಾವುದೇ ರೀತಿಯಲ್ಲಾದರೂ ಬದುಕನ್ನು ಸಂಭಾಳಿಸುವ ಸೂಕ್ಷ್ಮತೆ ದಕ್ಕುವುದು, ಅದು ದೊರಕುವಂತೆ ಮಾಡುವುದು ಚಾಪ್ಲಿನ್ ಜಾಣ್ಮೆ. ಇವೆಲ್ಲವೂ ಈ ನಾಟಕಗಳಲ್ಲಿ ಅಂತರ್ಗತವಾಗಿ ಮೂಡಿಬಂದಿದೆ.
©2024 Book Brahma Private Limited.