‘ಸುಪಾರಿ ಕೊಲೆ’ ನಾಟಕ ಒಂದೇ ಜಾಡನ್ನು ಹಿಡಿದಿರದೆ, ಸಾಮಾಜಿಕ ಬದ್ಧತೆ ಮತ್ತು ಕಲಾ ಫ್ರೌಡಿಮೆ ಹೊಂದಿರುವ ಚುರುಕು ಸಂಭಾಷಣೆ ಇಲ್ಲಿದೆ. ಓದಿನಲ್ಲಿ ಮತ್ತು ಪ್ರದರ್ಶನದಲ್ಲಿ ಯಶಸ್ಸು ಕಂಡಿರುವ ಈ ಸುಪಾರಿ ಕೊಲೆ ಇತ್ತೀಚಿಗೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. “ಸಿನಿಮೀಯ ರೀತಿಯಲ್ಲಿ ನಾಟಕಗಳನ್ನು ಕಟ್ಟುವಿಕೆ ತುಂಬ ಕಷ್ಟದ ವಿಚಾರ. ನಾಟಕದಲ್ಲಿ ಬರುವ ಪಾತ್ರಗಳ ಮೂಲಕ ವಾಚ್ಯಾರ್ಥವನ್ನು ರೂಪಿಸುತ್ತಾ,, ಸಿನಿಮೀಯ ರೀತಿಯಲ್ಲಿ ರೋಚಕತೆಯನ್ನು ಉಳಿಸಿಕೊಂಡು, ಒಂದು ಚಂದದ ಕಥೆಯನ್ನು ಹೆಣೆಯುವಲ್ಲಿ “ಸುಪಾರಿ ಕೊಲೆ” ಯಶಸ್ವಿಯಾಗಿದೆ. ಕೊಲೆಗಳಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು ಬಂದಿದ್ದರೂ, ಶೀರ್ಷಿಕೆಯೇ ಹೇಳುವಂತೆ ಇದೊಂದು ಸುಪಾರಿ ಕೊಲೆಯ ಸುತ್ತ ಸುತ್ತುವ ನಾಟಕವಾಗಿದೆ.
ಕೊಲೆಗಾರನ ವೃತ್ತಿಪರ ಸಿದ್ಧಾಂತಗಳು ಅವನನ್ನು ಹೇಗೆ ಪೇಚಿಗೆ ಸಿಕ್ಕಿಸುತ್ತದೆ ಎಂಬುದನ್ನು ಇಲ್ಲಿ ತುಂಬಾ ನಾಜೂಕಾದ ದೃಶ್ಯಗಳನ್ನು ಕಟ್ಟುವಿಕೆಯ ಮೂಲಕ ಶಿವಕುಮಾರ್ ತಮ್ಮ ಪ್ರೌಢಿಮೆ ಮೆರೆದಿದ್ದಾರೆ. ಕಥೆಯಾಗಿ ಓದಿಸಿಕೊಳ್ಳಬಹುದಾದ ಈ ಕಥೆ ನಾಟಕಕ್ಕೆ ರೂಪಾಂತರವಾದಾಗ ರೋಚಕತೆಯನ್ನು ಹೇಗೆ ಉಳಿಸಿಕೊಳ್ಳುತ್ತದೆ.
ಚಂದ್ರಶೇಖರ್ ನಿರ್ದೇಶನದಲ್ಲಿ ಕಥೆಗೆ ಮೋಸವಾಗಿಲ್ಲ. ಕಥೆ ಬರೆದ ಶಿವಕುಮಾರ್ ಮಾವಲಿ ಹಾಗೂ ಅದನ್ನು ಮೊದಲಿಗೆ ರಂಗದ ಮೇಲೆ ತಂದ ಹೊಂಗಿರಣ ತಂಡಕ್ಕೆ ಶುಭವಾಗಲಿ” ಎಂದಿದ್ದಾರೆ ‘ರಾಮಾ ರಾಮಾ ರೇ’ ಖ್ಯಾತಿಯ ನಟ ನಟರಾಜ್ ಎಸ್ ಭಟ್.
©2024 Book Brahma Private Limited.