‘ಸಿರಿಗೆ ಸೆರೆ’ ಕೃತಿಯು ಜಯರಾಮ್ ರಾಯಪುರ ಅವರು ಕೆಂಪೇಗೌಡ ಜೀವನಾಧಾರಿತ ನಾಟಕ ಕೃತಿಯಾಗಿದೆ. ಬೆಂಗಳೂರನ್ನು ಕಟ್ಟಿ ಆಳಿದ ಕೆಂಪೇಗೌಡನ ಆಡಳಿತದ ಕೊನೆ ಅವಧಿಯ ವಿದ್ಯಮಾನಗಳನ್ನು ಕುರಿತ ಐತಿಹಾಸಿಕ ನಾಟಕವಿದು. ವಿಜಯನಗರ ಅರಸರಿಂದ ಕೆಂಪೇಗೌಡರಿಗೆ ಅದಂತಹ ಅನ್ಯಾಯದ ಸಂಕೀರ್ಣ ಸ್ವರೂಪವನ್ನು ಈ ನಾಟಕ ಕಟ್ಟಿಕೊಡುತ್ತದೆ. ಗಾತ್ರದಲ್ಲಿ ಚಿಕ್ಕದಾದರೂ ತನ್ನ ಬದುಕಿನ ನಂಬಿಕೆ, ನಿಷ್ಠೆ, ತ್ಯಾಗಗಳಲ್ಲಿ ನೆಮ್ಮದಿ ಕಾಣುವ ಮಾಂಡಲೀಕ ರಾಜ್ಯದ ಸಂಸ್ಕೃತಿಯನ್ನು ಹೇಳುವ ನಾಟಕವಿದು. ಲೇಖಕ ಇಲ್ಲಿ ಪಾತ್ರಗಳಿಗೆ ಸಹಜತೆ ಜೀವಂತಿಕೆಗಳನ್ನು ನೀಡಿ, ಅಡೆತಡೆಯಿಲ್ಲದೇ ಅವು ನಾಟಕವನ್ನು ಮುಂದುವರಿಸುವಲ್ಲಿ ಹೇಳಬೇಕಾದ್ದನ್ನು ಖಚಿತವಾಗಿ ಹೇಳುವಲ್ಲಿ ತನ್ನತನದ ಛಾಪು ಮೂಡಿಸುತ್ತದೆ.
©2024 Book Brahma Private Limited.