ಈ ನಾಟಕವು ಶಂಬೂಕ ತಪಸ್ವಿಯ ಕಥಾನಕವನ್ನು ವಿವರಿಸುತ್ತದೆ. 1944ರಲ್ಲಿ ಮೊದಲ ಮುದ್ರಣ ಕಂಡಂತಹ ಈ ಪುಸ್ತಕವು ರಾಮಾಯಣದ ಕಥಾಹಂದರದಲ್ಲಿ ಗುರುತಿಸಿಕೊಳ್ಳುತ್ತದೆ. ಕುವೆಂಪು ಅವರು ಬರೆದಂತಹ ನಾಟಕಗಳಲ್ಲಿ ಈ ನಾಟಕವು ಬಹಳಷ್ಟು ಟೀಕೆಗಳಿಗೆ ಒಳಗಾದ ಕಾರಣ, ನಾಟಕದ ಮುಂದಿನ ಮುದ್ರಣದಲ್ಲಿ ಅಂದರೆ 1947ರಲ್ಲಿ ಕುವೆಂಪು ಅವರು ಮಾರ್ನುಡಿಯನ್ನು ಬರೆಯಬೇಕಾಯಿತು. ವೃದ್ಧ ಬ್ರಾಹ್ಮಣನೊಬ್ಬ ರಾಮನ ಅರಮನೆಯ ಎದುರು ತನ್ನ ಮಗನ ಕಳೇಬರವನ್ನು ತಂದು ಈ ಸಾವಿಗೆ ನೀನೇ ಕಾರಣ ಎಂದು ಹೇಳಿದಾಗ, ಚಿಂತಾಕ್ರಾಂತನಾದ ರಾಮನು, ಮಂತ್ರಿ ಸಭೆಯಲ್ಲಿ ಈ ಕುರಿತು ಚರ್ಚಿಸುತ್ತಾನೆ. ಶೂದ್ರನೊಬ್ಬ ತಪಸ್ಸಿಗೆ ಕುಳಿತ ಕಾರಣ, ವಟುವಿನ ಮಗನ ಹತ್ಯೆಯಾಯಿತು ಎಂದು ನಾರದ ಎಂಬುವವನು ರಾಮನಿಗೆ ಹೇಳುತ್ತಾನೆ. ಶೂದ್ರ ತಪಸ್ವಿಯನ್ನು ಸಂಹರಿಸಿ ಬ್ರಾಹ್ಮಣನ ಮಗುವಿನ ಜೀವವನ್ನು ಮತ್ತೆ ಮರಳಿ ಪಡೆಯುವವರೆಗಿನ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿ ಸಾಗುತ್ತದೆ. ಮೃತ್ಯು, ಭೈರವ ಮತ್ತು ರಾಮನ ನಡುವಿನ ಸಂಭಾಷಣೆಯೂ ಕೂಡ ಈ ನಾಟಕದ ಆಕರ್ಷಣೀಯ ಭಾಗ. ಶೂದ್ರ ತಪಸ್ವಿ ನಾಟಕವು ಮೂರು ದೃಶ್ಯಗಳನ್ನು ಓಳಗೊಂಡಿದೆ.
©2024 Book Brahma Private Limited.