‘ಶಾಂತಕವಿಗಳ ವಿಶ್ರಾಂತಿ’ ಪ್ರಕಾಶ ಗರುಡ ಅವರ ರಚನೆಯ ನಾಟಕವಾಗಿದೆ. 'ಶಾಂತಕವಿಗಳ ಜೀವನದಲ್ಲಿಯ ಮತ್ತು ಸಾಹಿತ್ಯದ ದೊಡ್ಡ ಸಿದ್ಧಿಯೆಂದರೆ ಹೊಸ ಭಾಷೆಯನ್ನು ಹುಡುಕಿಕೊಂಡದ್ದು, ಕವಿಯ ಪ್ರಜ್ಞೆಗು ಮತ್ತು ಭಾಷೆಗೂ ಅವಿಭಾಜ್ಯವಾದ ಸಂಬಂಧವನ್ನು ಕಂಡುಕೊಂಡದ್ದು, ಇದರ ಜೊತೆಗೆ ಶಾಂತಕವಿಗಳ ಮೂಲಭೂತ ಅನ್ವೇಷಣೆ ಅನಿವಾರ್ಯವಾಗಿದ್ದಷ್ಟೇ ಮುಗ್ಧವೂ ಆಗಿದೆ ಎನ್ನುವುದನ್ನು ಮರೆಯುವಂತಿಲ್ಲ.