ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ. ಬಿ.ವಿ.ರಾಜಾರಾಂ ಅವರು ಸುವರ್ಣ ಕರ್ನಾಟಕದ ನೆನಪಿಗಾಗಿ ( ಮೊದಲ ವರ್ಷ 2008) 50 ನಾಟಕಗಳನ್ನು ಸಂಪಾದಿಸಿದ್ದು, ಅವುಗಳಿಗೆ ಶಾಲಾ ಅಂಗಳದಲ್ಲಿ ಮಕ್ಕಳ ನಾಟಕಗಳು’ ಶೀರ್ಷಿಕೆ ನೀಡಿ 8 ಸಂಪುಟಗಳಲ್ಲಿ ಪ್ರಕಟಿಸಿದ್ದರು. ನಂತರ ಅವರ ಅವಧಿಯ ಕೊನೆಯ ವರ್ಷದ ಹೊತ್ತಿಗೆ ಈ ರೀತಿಯ ನಾಟಕಗಳು ಕೃತಿ ರೂಪದಲ್ಲಿ ಒಟ್ಟು 15 ಸಂಪುಟಗಳಾಗಿ ಪ್ರಕಟಗೊಂಡಿವೆ. ವಿವಿಧ ಲೇಖಕರು ಮಕ್ಕಳ ಮನೋವಿಕಾಸದ ದೃಷ್ಟಿಯಿಂದ ಬರೆದ ಇಲ್ಲಿಯ ನಾಟಕಗಳು ಪುರಾಣವನ್ನು ನೆನಪಿಸುತ್ತವೆ. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನುಸೂಚಿಸುತ್ತವೆ. ಸೌಹಾರ್ದದ ಬದುಕಿನ ಅನಿವಾರ್ಯತೆ ಹಾಗೂ ಅಗತ್ಯವನ್ನು ಪ್ರತಿಪಾದಿಸುತ್ತವೆ. ಮಕ್ಕಳ ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ; ಅವರ ಕಾಲ್ಪನಿಕ ಲೋಕವನ್ನು ವಿಸ್ತರಿಸುತ್ತವೆ. ಈ ಬೃಹತ್ ಯೋಜನೆಯ ಸಂಪುಟ-4ರ ಕೃತಿ ಇದು.
©2024 Book Brahma Private Limited.