ಸಾವಿರದ ಮೇಲೆ

Author : ವಿಶ್ವನಾಥ್ ಎನ್. ನೇರಳಕಟ್ಟೆ

Pages 56

₹ 80.00




Year of Publication: 2017
Published by: ವಿ.ಎನ್. ನೇರಳೆಕಟ್ಟೆ
Address: ಪಂತಡ್ಕ ಹೌಸ್, ಶ್ರೀ ಮಂಜುನಾಥ ನಿಲಯ, ನೇರಳಕಟ್ಟೆ, ಬಂಟ್ವಾಳ, ದಕ್ಷಿಣ ಕನ್ನಡ- 574253

Synopsys

‘ಸಾವಿರದ ಮೇಲೆ’ ವಿ.ಎನ್. ನೇರಳಕಟ್ಟೆ ಅವರು ರಚಿಸಿರುವ ಕಾಲ್ಪನಿಕ ನಾಟಕ. ಈ ಕಲ್ಪನೆ ಮಾತ್ರ ಅತ್ಯಂತ ವಿಶಿಷ್ಟ. ಸಹಸ್ರಾರು ವರ್ಷಗಳಿಂದಲೂ  ಮಾನವರು ಮಾತ್ರ ಚರ್ಚಿಸುತ್ತಾ ಬಂದಿರುವ ಒಂದು ಕುತೂಹಲಕಾರಿಯಾದ ವಸ್ತು. ಇಲ್ಲಿಯೂ ಚರ್ಚೆಯಾಗುವ ಹುಟ್ಟುವುದು ಸಹಜ. ಸಾವು ಅದು ಬಹು ನಿಗೂಢ. ಅದನ್ನು ಜಯಿಸುವ ಪ್ರಯತ್ನಗಳು ಲಾಗಾಯ್ತಿನಿಂದ ನಡೆಯುತ್ತಲೇ ಬಂದಿದೆ. ಸಾವನ್ನು ಜಯಿಸುವುದಕ್ಕಾಗಿಯೇ ಅದೆಷ್ಟೋ ಸಾವು ನೋವುಗಳಾಗಿವೆ. ಸಾವನ್ನು ಜಯಿಸುವುದು ಎಂದರೆ ಅದೊಂದು ಅನೂಹ್ಯ ಕಲ್ಪನೆಯೇ. ಈ ಬಗೆಯ ಚಿಂತನೆಗಳನ್ನು ಇರಿಸಿಕೊಂಡೇ ವಿಶ್ವನಾಥ ನೇರಳಕಟ್ಟೆಯವರು ನಾಟಕವೊಂದನ್ನು ರಚಿಸಿಕೊಟ್ಟಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಜಾನಪದ ಕಥಾಹಂದರವಿರುವ ನಾಟಕವೆಂದು ಕಂಡುಬಂದರೂ ಅದು ಜಾನಪದವಲ್ಲ. ಫ್ಯಾಂಟಸಿಲೋಕವನ್ನು ತೆರೆದಿಡುತ್ತಲೇ ಸಮಕಾಲೀನ ಸಂಗತಿಗಳನ್ನು. ನಮ್ಮ ನಡುವಿನ ರಾಜಕೀಯವನ್ನು, ಅರಾಜಕೀಯವನ್ನು, ಆಧುನಿಕ ಜಗತ್ತಿನ ಅರ್ಥ ಸಂಗ್ರಹದ ವೈಪರೀತ್ಯಗಳನ್ನು ವಿಶಿಷ್ಟ ಬಗೆಯಲ್ಲಿ ಅನಾವರಣಗೊಳಿಸುವ  ಪ್ರಯತ್ನ ಮಾಡಿದೆ. ಸಾಂಪ್ರದಾಯಿಕ ನಾಟಕ ಕೃತಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾಗೇ ಈ ನಾಟಕದಲ್ಲಿ ಬರುವ ಪಾತ್ರಗಳಲ್ಲಿ ಕಥಾನಾಯಕನಿಲ್ಲ. ಕಥಾನಾಯಕಿಯಿಲ್ಲ, ಸಾಮಾಜಿಕ ಸಂಕೀರ್ಣ ಸಂಗತಿಗಳನ್ನು ಬಿಚ್ಚಿಕೊಳ್ಳಬಲ್ಲ ಜನಸಾಮಾನ್ಯರೂ ಇಲ್ಲ . ಹಾಗೆ ನೋಡಿದರೆ ಇಲ್ಲಿ ಬರುವ ಎಲ್ಲ ಪಾತ್ರಗಳೂ ಒಂದು ಬಗೆಯ ಖಳ ಪಾತ್ರಗಳೇ ಈ ನಾಟಕವನ್ನು ಮನೋರಂಜನೆ ನೀಡುವುದಕ್ಕಾಗಿ ಯಾರು ಕೂಡಾ ಅಭಿನಯಿಸಬಹುದು ಎಂದು ಹೇಳುವ ಹಾಗಿಲ್ಲ. ಏಕೆಂದರೆ, ಪ್ರತಿಯೊಂದು ದೃಶ್ಯವೂ ಸಾವಿನ ನಿಗೂಢತೆಯ ಬಗ್ಗೆ, ಸಾವನ್ನು ಜಯಿಸುವುದರ ಬಗ್ಗೆ ಸಾವಿರದ ಮೇಲೆ ಉಂಟಾಗಬಹುದಾದ ಸಾವಿರಕ್ಕೂ ಮೇಲ್ಪಟ್ಟ ವಿವಿಧ ವಿಚಾರಗಳನ್ನು ತಲುಪಿ ಚರ್ಚಿಸುವಂತೆ ಮಾಡುತ್ತದೆ.

About the Author

ವಿಶ್ವನಾಥ್ ಎನ್. ನೇರಳಕಟ್ಟೆ

ಲೇಖಕ ವಿ.ಎನ್. ನೇರಳಕಟ್ಟೆ ಕಾವ್ಯನಾಮದ ಮೂಲಕ ಕತೆ-ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಪಂತಡ್ಕದ ವಿಶ್ವನಾಥ್ ಎನ್. ನೇರಳಕಟ್ಟೆ ಅವರು, ‘ಡಾ.ನಾ. ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ’ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ್ದಾರೆ. ಪ್ರಸ್ತುತ ಸಿದ್ಧಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ತುಸು ತಿಳಿದವನ ಪಿಸುಮಾತು’ ಅಂಕಣ ಬರಹ ಬರೆಯುತ್ತಿದ್ದಾರೆ. ಕೃತಿಗಳು:   ಮೊದಲ ತೊದಲು, ಕಪ್ಪು ಬಿಳುಪು (ಕವನ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ) ಮತ್ತು ಸಾವಿರದ ಮೇಲೆ (ನಾಟಕ). ಇವರಿಗೆ ಪುಟ್ಟಣ್ಣ ಕುಲಾಲ್‌ ಯುವ ಕತೆಗಾರ ಪುರಸ್ಕಾರ’, ‘ಯೆನಪೋಯ ಎಕ್ಸಲೆನ್ಸಿ ಪ್ರಶಸ್ತಿ ಹಾಗೂ ಚಂದನ ಸಾಹಿತ್ಯ ವೇದಿಕೆ ...

READ MORE

Related Books