'ಸಾಕು ತಂದೆ ರೂಮಿ’ ಎನ್. ಸಿ ಮಹೇಶ್ ಅವರ ರಚನೆಯ ನಾಟಕವಾಗಿದೆ. ‘ಸಾಕುತಂದೆ ರೂಮಿ’ ನಾಟಕವನ್ನ ರಂಗಕೃತಿಯಾಗಿ ಓದಲು, ರಂಗದ ಮೇಲೆ ತರಲೂ ಒಂದು ಸಿದ್ಧತೆ ಬೇಕು. ಪ್ರೇಕ್ಷಕರಿಗೂ ಈ ನಾಟಕ ಸ್ವೀಕರಿಸಲು ಕೂಡ ಬಹುದೊಡ್ಡ ಮಾನಸಿಕ ಭಾವನಾತ್ಮಕ ಬೌದ್ಧಿಕ ಸಿದ್ಧತೆಯಂತೂ ಬೇಕೇ ಬೇಕು. ಇಲ್ಲದೆ ಹೋದರೆ ಕೆಲವರಿಗೆ ನಿರಾಶೆಯಾಗಬಹುದು, ಕೆಲವರಿಗೆ ಅಸಹನೀಯ ಎನ್ನಿಸಬಹುದು, ಎಲ್ಲೋ ಕೆಲವರಿಗೆ ಮುಕ್ತಮನಸ್ಸಿನಿಂದ ಹೋದವರಿಗೆ ಹೊಸದೇನೋದಕ್ಕಬಹುದು. ಈ ನಾಟಕ ನಮ್ಮ ಈವರೆಗಿನ ತಿಳುವಳಿಕೆಯನ್ನ ಅಳಿಸಿಹಾಕಿ ಹೊಸ ಆಲೋಚನಾ ಕ್ರಮವನ್ನ ಹುಟ್ಟುಹಾಕುವ ಪರಿಗೆ ಬೆರಗು ಮೂಡುತ್ತದೆ. ನಮ್ಮ ದೇಹದ ವ್ಯಾಖ್ಯಾನ, ನಮ್ಮ ಹೃದಯದ ವ್ಯಾಖ್ಯಾನ, ನಮ್ಮ ಉಸಿರಿನ ವ್ಯಾಖ್ಯಾನ ನಮ್ಮ ಬದುಕಿನ ವ್ಯಾಖ್ಯಾನಗಳನ್ನೆಲ್ಲ ಇದು ಹಿಂದಕ್ಕೆ ಸರಿಸಿ ಹೊಸದೇ ಆದ ದೃಷ್ಟಿಕೋನವನ್ನ ಹುಟ್ಟುಹಾಕುತ್ತದೆ. ಹಾಗಾಗಿ ಈ ಔನ್ನತ್ಯಕ್ಕೆ ತಲುಪುವುದು ಯಾವುದೇ ಒಬ್ಬ ಸೃಜನಶೀಲ ಬರಹಗಾರನ ಸಾರ್ಥಕತೆಯೇ ಸರಿ. ‘ಸಾಕುತಂದೆ ರೂಮಿ’ ಯ ಮೂಲಕ ಕನ್ನಡ ಸೃಜನಶೀಲ ನಾಟಕ ಪರಂಪರೆಗೆ ಕಾವ್ಯದ ಹೊಸ ತಂಗಾಳಿ ಬೀಸಿದಂತಾಗಿದೆ.
©2024 Book Brahma Private Limited.