‘ಪಿಸುಣಾರಿ ಪ್ರೇಮ ಪ್ರಕರಣ’ ಕೃತಿಯು ರಾಜೆಂದ್ರ ಕಾರಮತ ಅವರ ನಾಟಕ ಕೃತಿ. ಕನ್ನಡ ರಂಗಭೂಮಿ ಅನೇಕ ತಿರುವುಗಳನ್ನು ಪಡೆಯುತ್ತಾ, ನಾನಾ ಅವಸ್ಥಾಂತರಗಳನ್ನು ಹೊಂದುತ್ತಾ ಸಾಗಿದಂತೆ ನಗೆನಾಟಕಗಳ ಯುಗ ಮುಗಿದೇ ಹೋಯಿತು ಎಂದುಕೊಳ್ಳುತ್ತಿರುವಾಗಲೇ, ರಾಜೇಂದ್ರ ಕಾರಂತರಂತವರು ಅಲ್ಲಲ್ಲಿ ಕಾಣಿಸಿಕೊಂಡು ಮತ್ತೆ ಜನರನ್ನು ರಂಗಭೂಮಿಗೆ ಎಳೆತಂದರು. ಒಂದು ಕಡೆ ಗಂಭೀರ ನಾಟಕಗಳನ್ನು ರಚಿಸುತ್ತಾ ರಂಗಭೂಮಿಯಲ್ಲಿ ತಮ್ಮ ಅಸ್ತಿತ್ವವನ್ನು ಭದ್ರಪಡಿಸುಕೊಳ್ಳುತ್ತಲೇ ನಗೆ ನಾಟಕಗಳೆಡೆಗೂ ಇಲ್ಲಿ ವಾರೆನೋಟ ಬೀರಿದ್ದಾರೆ. ‘ಪಿಸುಣಾರಿ ಪ್ರೇಮ ಪ್ರಕರಣ’ ಈಗಾಗಲೇ ಹಲವಾರು ಪ್ರಯೋಗಗಳನ್ನು ಕಂಡ ನಾಟಕವಾಗಿದೆ. ಇಲ್ಲಿರುವ ವಿಚಾರಗಳು ಅಭಿನಯಿಸಲು ಸುಲಭವಾಗಿದ್ದು, ರಂಗಸಜ್ಜಿಕೆ, ಬೆಳಕು ಎಲ್ಲವೂ ಸರಳವಾಗಿದೆ. ಸುಲಭವಾಗಿ ರಂಗಕ್ಕೆ ಒಗ್ಗುವುದರಿಂದ ಎಲ್ಲಾ ಪ್ರದೇಶಗಳಿಗೂ ಈ ನಾಟಕದಲ್ಲಿನ ವಿಚಾರಗಳು ಸಲ್ಲುತ್ತದೆ. ಜನರನ್ನು ಮರಳಿ ರಂಗಭೂಮಿಗೆ ತರುವಲ್ಲಿ ಈ ಕೃತಿಯು ಯಶಸ್ವಿಯಾಗಿದೆ.
©2024 Book Brahma Private Limited.