‘ಪಂಚಾವರಂ’ ಲೇಖಕ ಮಹಾಂತೇಶ ನವಲಕಲ್ ನಾಟಕ ಕೃತಿ. ಕೃತಿಗೆ ಡಾ. ಶರಣಬಸಪ್ಪ ವಡ್ಡನಕೇರಿ ಅವರ ಬೆನ್ನುಡಿ ಬರಹವಿದೆ. ಕೃತಿ ಮತ್ತು ಕೃತಿಕಾರರ ಕುರಿತು ಬರೆಯುತ್ತಾ ‘ಮಹಾಂತೇಶ ನವಲಕಲ್ ಕಥೆಗಾರರಾಗಿ ಹೆಸರುವಾಸಿಯಾದ ಹೆಸರು. ಅವರ ಬುದ್ಧಗಂಟೆಯ ಸದ್ದು ಯಾವ ಕಾಲದಲ್ಲೂ ಸದ್ದು ಮಾಡುವಂತಹದು. ಅದೇ ರೀತಿ ಇವರು ರಚಿಸಿದ ನಾಟಕ ನಾನು ಚಂದ್ರಗುಪ್ತನೆಂಬ ಮೌರ್ಯ ಸುಮಾರು 180 ಶೋ ಆಗಿ, ನಾಡಿನಾದ್ಯಂತ ಇವರ ಹೆಸರನ್ನು ಯಶಸ್ವಿ ನಾಟಕಕಾರರ ಹೆಸರಿನಲ್ಲಿ ಸೇರಿಸಿಕೊಂಡಿದೆ. ಮಹಾಂತೇಶರ ಬರವಣಿಗೆಯ ದೊಡ್ಡ ಶಕ್ತಿ ಎಂದರೆ ಎಲ್ಲವನ್ನು ಅಂತಃಕರಣದ ದುರ್ಭೀನಿನಿಂದ ನೋಡುವದು ಹಾಗೂ ಕಾರುಣ್ಯದ ಬೆಳಕಿನಲ್ಲಿ ಬದುಕನ್ನು ಹುಡುಕುವುದು. ಅವರ ಈ ಪಂಚಾವರಂ ನಾಟಕ ಬದುಕಿಗಾಗಿ ಒಪ್ಪಿತ ಶೋಷಿಣೆಯ ಅನೇಕ ಆಯಾಮಗಳನ್ನು ನಮಗೆ ಹೇಳುತ್ತದೆ. ನಾವು ಇಂತಹ ಕಾಲದಲ್ಲಿ ಇದ್ದೇವೆಯೇ ಎಂದು ಮನಸ್ಸು ಭಾರವಾಗುತ್ತದೆ ಇದು ನವಲಕಲ್ ಅವರ ಬರವಣಿಗೆಯ ಶಕ್ತಿ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.