ಶ್ರೀರಂಗರು ಬರೆದ ನಾಟಕಗಳ ಸಂಕಲನ-ನಿರಾಹಾರ. ಕಲಿತ ಕನ್ನಡ ನಾಡು, ನಿರಾಹಾರದ ನೀತಿ, ಮುನ್ನೋಟ, ಭಾಗ್ಯದ ಬರಗಾಲ, ಬೀದಿಯ ಭೂತ, ಹಸಿವೆಯ ಹಗಲುಗನಸು, ಬಕಾಸುರ ಹೀಗೆ ಒಟ್ಟು 7 ನಾಟಕಗಳನ್ನು ಸಂಕಲನದಲ್ಲಿ ಸೇರ್ಪಡೆಗೊಳಿಸಲಾಗಿದೆ. ಈ ನಾಟಕಗಳ ಪೈಕಿ, ಮುನ್ನೋಟ ಹೊರತುಪಡಿಸಿ, ಕೆಲವು ಜಯಂತಿ, ಉಷಾ ಹಾಗೂ ತಮಾಷೆ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು. ಈ ಎಲ್ಲ ನಾಟಕಗಳು ಹೆಚ್ಚುಕಡಿಮೆ ಬರಗಾಲಕ್ಕೆ ಸಂಬಂಧಿಸಿದ ವಿಷಯ ವಸ್ತುವನ್ನು ಹೊಂದಿದ್ದು, ಲೇಖಕರು ‘ನಿರಾಹಾರ’ ಕೃತಿಯು ‘ಬರಗಾಲ ಏಕಾಂಕಗಳ ಸಂಗ್ರಹ’ ಎಂದೇ ಹೇಳಿಕೊಂಡಿದ್ದಾರೆ.
ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...
READ MORE