ಸಂಸ್ಕೃತ ನಾಟಕಕಾರರಲ್ಲಿ ಭಾಸನಿಗೆ ಮಹತ್ವದ ಸ್ಥಾನವಿದೆ. ಮಹಾಭಾರತದ ಕಥಾ ಪ್ರಸಂಗಗಳನ್ನು ತೆಗೆದುಕೊಂಡು ರಚಿಸಿದ ಮಧ್ಯಮ ವ್ಯಾಯೋಗ, ದೂತ ಘಟೋದ್ಗಜ ಇತ್ಯಾದಿ ನಾಟಕಗಳು ಜನರ ಮನಸೆಳೆದಿವೆ. ಇವು ಅಲ್ಲದೆ, ಚಾರುದತ್ತ, ಅವಿಮಾರಕ ಮುಂತಾದ ನಾಟಕಗಳನ್ನೂ ರಚಿಸಿರುವನಾದರೂ, ಅಷ್ಟಾಗಿ ಅವು ಪ್ರಯೋಗಗೊಳ್ಳಲಿಲ್ಲ. ವಿಜಯಾ ಸುಬ್ಬರಾಜ್ ಅವರ 'ಮಿಲನ' ನಾಟಕವು ಭಾಸ ಅವರ ನಾಟಕಗಳ ಸಾರಾಂಶವನ್ನಾಧರಿಸಿ ರಚಿಸಿರುವ ನಾಟಕ.
ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...
READ MORE