ಪ್ರಕಾಶ್ ಕಂಬತ್ತಳ್ಳಿ ಅವರ ನಾಟಕ ಸಂಕಲನ ಮನಸ್ಸಿಗೆಷ್ಟು ಮುಖಗಳು. ಪ್ರಕಾಶ್ ಕಂಬತ್ತಳ್ಳಿಯವರ ಶೈಲಿಯೇ ಅಂತದ್ದು. ರಂಜನೆಯ ಜೊತೆಗೆ ವಿಚಾರಗಳನ್ನು ಪ್ರತಿಪಾದಿಸುತ್ತಿರುತ್ತಾರೆ. ರಂಗದ ಮೇಲೆ ಅತ್ಯಂತ ಸರಳವಾಗಿ, ರಂಜನೀಯವಾಗಿ ಅಭಿನಯಿಸಲ್ಪಡುವ ಈ ನಾಟಕ ಈಗಾಗಲೇ ರಂಗದ ಮೇಲೆ ಸಾಕಷ್ಟು ಪ್ರಯೋಗ ಕಂಡು ಜನಪ್ರಿಯವೂ ಆಗಿದೆ. ಮನುಷ್ಯನ ಮನಸ್ಸೇ ಹಾಗೆ. ಅದನ್ನು ಹೀಗೇ ಎಂದು ಹೇಳಲಾಗುವುದಿಲ್ಲ. ಕ್ಷಣ ಕ್ಷಣಕ್ಕೂ ಮನಸ್ಸಿನ ಸ್ಥಿತಿ ಬದಲಾಗುತ್ತಲೇ ಇರುತ್ತದೆ. ನಮ್ಮ ಮನಸ್ಸಿಗೆ ಅದೆಷ್ಟು ಮುಖಗಳು ಎಂದು ನಮಗೇ ಗೊತ್ತಾಗುವುದಿಲ್ಲ. ಈ ನಾಟಕ ನೋಡಿದಾಗ, ಆರೆ! ಇದೆಲ್ಲಾ ಹೀಗೇನಾ? ಹೇಗಿದ್ದವರು ಹೇಗೆಲ್ಲಾ ಬದಲಾದರು? ಬದಲಾವಣೆಗೆ ಕಾರಣವೇನು? ಎಂಬ ಪ್ರಶ್ನೆಗಳು ಕಾಡಿದರೂ, ನಮ್ಮ ಸಮಾಜವನ್ನು ಗಮನಿಸಿದಾಗ ಇದೆಲ್ಲ ಸಹಜ ಅನ್ನಿಸದೆ ಇರದು. 'ಮನಸ್ಸಿಗೆಷ್ಟು ಮುಖಗಳು' ನಾಟಕ ಒಂದು ಕುಟುಂಬದ ಕಥೆಯನ್ನು ಹೇಳುತ್ತಿದ್ದಂತೆ ಕಂಡರೂ ಅದು ಹಾಗಿರುವುದಿಲ್ಲ. ಒಂದು ಕುಟುಂಬದ ನೆವದಲ್ಲಿ ಒಂದು ಸಮೂಹದ ಕಥೆಯನ್ನು ಹೇಳುತ್ತಿರುತ್ತದೆ.
©2024 Book Brahma Private Limited.