ಮಹಾತ್ಮ ಕಬೀರದಾಸ

Author : ಬೆಳ್ಳಾವೆ ನರಹರಿಶಾಸ್ತ್ರಿ

Pages 157




Year of Publication: 1933
Published by: ಬೆಳ್ಳಾವೆ ಪುಸ್ತಕಾಲಯ
Address: ಬಳೇಪೇಟೆ, ಬೆಂಗಳುರು ನಗರ.

Synopsys

ಮಹಾತ್ಮ-ಸಂತ ಭಕ್ತ ಕಬೀರದಾಸರ ಜೀವನ ವೃತ್ತಾಂತವನ್ನು ರಂಗರೂಪಕ್ಕೆ ತಂದಿದ್ದು-ಬೆಳ್ಳಾವೆ ನರಹರಶಾಸ್ತ್ರಿಗಳು. ನಾಟಕದ ಶೀರ್ಷಿಕೆ-ಮಹಾತ್ಮ ಕಬೀರದಾಸ. ಈ ನಾಟಕದಲ್ಲಿ ಕಬೀರದಾಸನ ಭಕ್ತಿ-ಜ್ಞಾನ ಹಾಗೂ ವೈರಾಗ್ಯವನ್ನು ತೋರುವುದು ಹಾಗೂ ಕೋಮು ಸಾಮರಸ್ಯಕ್ಕೆ ಒತ್ತು ನೀಡುವ ಅವರ ಸಂದೇಶಗಳನ್ನು ಪ್ರಚುರ ಪಡಿಸುವುದು ಇಲ್ಲಿಯ ಉದ್ದೇಶ.

ಶ್ರೀರಾಮಚಂದ್ರನ ಭಕ್ತನಾಗಿರುವುದರಿಂದ ನಾಟಕದಲ್ಲಿ ಶ್ರೀರಾಮಚಂದ್ರನ ಪಾತ್ರ, ಕಬೀರದಾಸ, ಈತನ ಮಗ ಕಮಾಲದಾಸ, ಉದ್ಯಮಿ ರತ್ನಾಕರ, ಕಬೀರದಾಸನ ಪತ್ನಿ ಸುಂದರಬಿ, ಮಧುಮೋಹಿನಿ, ಗಂಗಾದೇವಿ, ಸಾಧುಗಳು, ದಾಸಜನರು, ಗ್ರಾಮರಕ್ಷಕರು ಹೀಗೆ ವಿವಿಧ ಪಾತ್ರಗಳು ಹಾಗೂ ಅಂದಿನ ಸಾಮಾಜಿಕ ವ್ಯವಸ್ಥೆ ಎಲ್ಲವೂ ಕಬೀರದಾಸನನ್ನು ಹೇಗೆ ರೂಪಿಸಿದವು ಎಂಬುದಕ್ಕೆ ಪ್ರಮುಖ ಆವರಣವಾಗಿ ತೆರೆದುಕೊಳ್ಳುತ್ತವೆ.

About the Author

ಬೆಳ್ಳಾವೆ ನರಹರಿಶಾಸ್ತ್ರಿ
(21 September 1882 - 21 June 1961)

ನಾಟಕಗಳು ಇಲ್ಲದೇ ಸೊರಗಿದ್ದ ಕಾಲದಲ್ಲಿ, ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟು, ಕನ್ನಡಿಗರಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದವರು ನರಹರಿಶಾಸ್ತ್ರಿ. 1882 ಸೆಪ್ಟಂಬರ್‌ 21 ತುಮಕೂರಿನ ಬೆಳ್ಳಾವೆ ಗ್ರಾಮದಲ್ಲಿ ಜನಿಸಿದರು. 1901ರಲ್ಲೇ ’ಸ್ಯಮಂತಕೋಪಾಖ್ಯಾನ’ ನಾಟಕ ರಚನೆ. ಗುಬ್ಬಿ ವೀರಣ್ಣನವರ ಅಪೇಕ್ಷೆಯಂತೆ ರಚಿಸಿದ ನಾಟಕ ಶ್ರೀಕೃಷ್ಣ ಲೀಲಾ. ಗುಬ್ಬಿ ಕಂಪನಿಗೂ, ನಾಟಕಕಾರರಿಗೂ ತಂದುಕೊಟ್ಟ ಹೆಸರು. ನಂತರ ರಚಿಸಿದ್ದು ’ಸದಾರಮೆ, ಗುಲೇಬಕಾವಲಿ, ಕಂಸವಧೆ, ಲಂಕಾದಹನ, ರುಕ್ಮಿಣೀ ಸ್ವಯಂವರ, ಮಹಾತ್ಮ ಕಬೀರದಾಸ, ಜಲಂಧರ’ ಈ ನಾಟಕಗಳು ಗುಬ್ಬಿ ಕಂಪನಿಯಿಂದಲೇ ಪ್ರದರ್ಶನಗೊಂಡವು. ’ಶಂಕರವಿಜಯ, ದಶಾವತಾರ, ಸತೀ ಅನಸೂಯ, ಶಾಕುಂತಲ, ಪಾರಿಜಾತ, ಹೇಮರೆಡ್ಡಿ ಮಲ್ಲಮ್ಮ, ಪ್ರಭಾವತಿ ಮುಂತಾದ ನಾಟಕಗಳನ್ನು ಬರೆದರು. ಇವರ ...

READ MORE

Related Books