‘ಲೀಲಾವತೀ ಮತ್ತು ಇತರ ವಿಜ್ಞಾನ ನಾಟಕಗಳು’ ಶಶಿಧರ ಡೋಂಗ್ರೆ ಅವರ ನಾಟಕ ಸಂಕಲನವಾಗಿದೆ. ಇದಕ್ಕೆ ಎಚ್.ಎಸ್.ಉಮೇಶ್ ಅವರ ಮುನ್ನುಡಿ ಬರಹವಿದೆ; ನಾಟಕಗಳ ಚರಿತ್ರೆಯನ್ನು ಗಮನಿಸಿದರೆ ಅದರಲ್ಲೊಂದು ವಿನ್ಯಾಸ ಕಾಣಿಸುತ್ತದೆ. ಇದು ಇನ್ನಿತರ ಪ್ರಮುಖ ಸಾಹಿತ್ಯ ಪ್ರಕಾರಗಳಾದ ಕಥೆ, ಕಾವ್ಯ, ಕಾದಂಬರಿಗಳಿಗೂ ಅನ್ವಯವಾಗುತ್ತದೆ ಎನಿಸುತ್ತದೆ. ದೈವವನ್ನು ದೇವರನ್ನು ಒಲಿಸುವ ಭಕ್ತಿಭಾವದ ಪ್ರಾಧಾನ್ಯತೆಯನ್ನು ಇವು ಹೊಂದಿರುತ್ತವೆ. ಅದರ ಸುತ್ತ ಹೆಣೆದಿರುವ ಕಾಲ್ಪನಿಕ ಚಿತ್ರಗಳೇ ಇವುಗಳಲ್ಲಿ ತುಂಬಿರುತ್ತವೆ. ಇಂಥಹ ಸ್ಥಿತಿಯಲ್ಲಿಯೇ ಪುರಾಣಗಳು ಜನ್ಮ ತಾಳುವುದು. ಆ ಪುರಾಣಕ್ಕೆ ಸ್ಥಳ ಮತ್ತು ಕಾಲದ ಹಂಗಿರುವುದಿಲ್ಲ. ಹಾಗಾಗಿ ವಾಸ್ತವತೆಯ ಚೌಕಟ್ಟನ್ನು ಅವು ಬಯಸುವುದಿಲ್ಲ. ಮನೋಲೋಕದಲ್ಲಿ ವಾಸ್ತವವೆನಿಸುವ ಗುಣವನ್ನು ಅವು ಹೊಂದಿದ್ದರೆ ಸಾಕು. ನಮ್ಮ ಚಿಂತನೆ ಮತ್ತು ವಾಸ್ತವತೆಯ ಅರಿವು ಹೆಚ್ಚಿದಂತೆಲ್ಲ ಪುರಾಣದಿಂದ ಇತಿಹಾಸದ ಕಡೆಗೆ ನಮ್ಮ ಚಿಂತನೆ ಹೊರಳಿಕೊಂಡಿತು. ಹಾಗಾಗಿಯೇ ನಮ್ಮ ಮೊದಲ ನಾಟಕಗಳಲ್ಲಿ ಬಹುಪಾಲು ನಾಟಕಗಳು ಪೌರಾಣಿಕವಾದವುಗಳೇ. ಇದಕ್ಕೆ ಗ್ರೀಕ್ ಮತ್ತು ಸಂಸ್ಕೃತ ನಾಟಕಗಳು ಪುರಾವೆ ಒದಗಿಸುತ್ತವೆ ಎಂಬುವುದನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.
©2024 Book Brahma Private Limited.