ಲಂಕೇಶರ ನಾಟಕಗಳು

Author : ಪಿ. ಲಂಕೇಶ್

Pages 100

₹ 80.00




Year of Publication: 2018
Published by: ಲಂಕೇಶ್ ಪ್ರಕಾಶನ
Address: ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು

Synopsys

ಖ್ಯಾತ ಪತ್ರಕರ್ತ, ಪ್ರಕಾಶಕ ಹಾಗೂ ನಾಟಕಕಾರ ಪಿ.ಲಂಕೇಶ ಅವರ ಟಿ.ಪ್ರಸನ್ನರ ಗೃಹಸ್ಥಾಶ್ರಮ, ಪೊಲೀಸರಿದ್ದಾರೆ ಎಚ್ಚರಿಕೆ ಹಾಗೂ ಸಿದ್ಧತೆ ಎಂಬ ಮೂರು ನಾಟಕಗಳಣ್ನು ಸಂಕಲಿಸಿದ ಕೃತಿ -ಲಂಕೇಶರ ನಾಟಕಗಳು. ಸಾಮಾಜಿಕ-ಸಾಂಪ್ರದಾಯಿಕ ವಿಚಾರ-ಆಚರಣೆಗಳಲ್ಲಿರುವ ವೈರುಧ್ಯಗಳನ್ನು ನಾಟಕಗಳ ವಸ್ತುವಾಗಿಸಿಕೊಂಡು ಪ್ರೇಕ್ಷಕರ ಮನದಲ್ಲಿ ಮರುಚಿಂತನೆಗೆ ಪ್ರೇರೇಪಣೆ ನೀಡುವ ಲೇಖಕರು, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರದ ಮಹತ್ವವನ್ನು ಕೇಂದ್ರವಾಗಿಸಿ ಸಂದೇಶ ನೀಡುತ್ತಾರೆ. ಈ ನಾಟಕಗಳು ಉತ್ತಮ ಪ್ರದರ್ಶನಾತ್ಮಕ ಗುಣಗಳನ್ನು ಒಳಗೊಂಡಿದ್ದು, ಪರಿಣಾಮಕಾರಿಯಾದ ಸಂಭಾಷಣೆಯಿಂದಲೂ ಪ್ರೇಕ್ಷಕರನ್ನು ಸೆಳೆಯುತ್ತವೆ.

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books