ಸಾಸ್ವೆಹಳ್ಳಿ ಸತೀಶ್ ಅವರ ಕೆಂಡದ ಮಳೆ ಕರೆವಲ್ಲಿ ಕೃತಿಯು ಕುಂ.ವೀರಭದ್ರಪ್ಪ ಕಥೆಯಾಧಾರಿತ ನಾಟಕವಾಗಿದೆ. ಈ ಕೃತಿಗೆ ಎಂ.ಬಿ.ನಟರಾಜ್ ಬೆನ್ನುಡಿ ಬರೆದಿದ್ದು, ‘ಈ ರಂಗರೂಪದ ಕೃತಿ ಒಂದು ಅತ್ಯುತ್ತಮ ಪ್ರಯತ್ನ. ನಮ್ಮ ಗ್ರಾಮೀಣ ಬದುಕಿನ ಅನೇಕ ಕ್ರೂರ ಮುಖಗಳಲ್ಲಿ ಜಾತಿ ಮತದ ಕ್ರೌರ್ಯ ಬಲವಾಗಿ ಬೇರೂರಿದೆ. ಅದರ ಅವತಾರ ಯಾವಾಗ ಹೇಗೆ ಏರಿ ಬರುತ್ತದೆ ಎಂಬುದು ಹೇಳಲು ಅಸಾಧ್ಯ. ಇದರ ಮುಳ್ಳಿನ ಚಕ್ರಕ್ಕೆ ಸಿಲುಕಿಕೊಂಡ ಅಮಾಯಕರ ಪಾಡನ್ನು ಈ ಕಥೆ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಇಂಥದ್ದೊಂದು ದಬ್ಬಾಳಿಕೆಯ ಪ್ರಸಂಗದಲ್ಲಿ ಅಡಕವಾಗಿರುವ ಅನೇಕ ಸೂಕ್ಷ್ಮಗಳೊಂದಿಗೆ ಇದನ್ನು ರಂಗರೂಪಕ್ಕೆ ತಂದಿರುವುದು ಬಹುಮುಖ್ಯ ಕಾರ್ಯ. ಇದರ ಆಯ್ಕೆಯಲ್ಲಿ ಸಾಮಾಜಿಕ ಬದ್ಧತೆಯೂ ಇದೆ. ಅದರ ರಂಗಸಾಧ್ಯತೆಗಳನ್ನು ಅನ್ವೇಷಿಸಿಕೊಳ್ಳುತ್ತಾ, ಕಠೋರ ಸತ್ಯವೊಂದನ್ನು ಕಣ್ಣೆದುರು ನಿಲ್ಲುವಂತೆ ಮಾಡುವ ಪ್ರಯತ್ನವೂ ಇದೆ. ರಂಗರೂಪದ ಆರಂಭದಿಂದ ಮುಕ್ತಾಯದವರೆಗೂ ಕುತೂಹಲ, ಔಚಿತ್ಯವನ್ನು ಉಳಿಸಿಕೊಂಡು ನಾಟಕ ಕಟ್ಟಿರುವ ಕ್ರಿಯೆ ನಿಜಕ್ಕೂ ಸಾರ್ಥಕವಾಗಿದೆ ಎಂದಿದ್ದಾರೆ.
©2024 Book Brahma Private Limited.