ಜನಗತ್ತಿನಾದ್ಯಂತ ಮೇ ಒಂದರಂದು ಆಚರಿಸುವ ‘ಮೇ ದಿನ’ದ ವಸ್ತುವುಳ್ಳ ನಾಟಕ ‘ಕೆಂಪು ಮೇ ದಿನ’. ಈ ನಾಟಕಕ್ಕೆ ಮುನ್ನುಡಿ ಬರೆಯುತ್ತಾ ಬರಗೂರು ರಾಮಚಂದ್ರಪ್ಪ ಅವರು ‘`ಮೇ ದಿನಾಚರಣೆಗೆ ಮೂಲ ಕಾರಣವಾದ ಚಳವಳಿಯ ಚಿತ್ರಣವನ್ನು ಚಾರಿತ್ರಿಕ ನೆಲೆಯಲ್ಲಿ ಕಟ್ಟಿಕೊಡುವ ನಾಟಕ ಇದಾಗಿದೆ. ಈ ನಾಟಕದಲ್ಲಿ ಗಮನಿಸಬೇಕಾದ ಒಂದು ಮುಖ್ಯ ವಿಷಯವೆಂದರೆ, ಪಾತ್ರಗಳ ವೈವಿಧ್ಯತೆ. ಇಲ್ಲಿ ಕಾರ್ಮಿಕ ನಾಯಕರಿದ್ದಾರೆ, ಕಾರ್ಮಿಕರಿದ್ದಾರೆ, ಮಹಿಳೆ ಮಕ್ಕಳಿದ್ದಾರೆ, ಉದ್ಯಮಿಯ ಮಗಳು ‘ನಿನಾ’ ಇದ್ದಾಳೆ. ಕಂಠಪಾಠ ಒಪ್ಪಿಸದೆ ಸಂದರ್ಭೋಚಿತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಇವರೆಲ್ಲ ಪರಸ್ಪರ ಅನುಸಂಧಾನಿಸುತ್ತ ನಿರ್ದಿಷ್ಟ ಗುರಿಯತ್ತ ಸಾಗುತ್ತಾರೆ. ಸೈದ್ಧಾಂತಿಕ ಅರಿವು ಮತ್ತು ಹೋರಾಟಕ್ಕೆ ಭೌಗೋಳಿಕ ಗಡಿಗಳಿಲ್ಲವೆಂಬ ಸಾಂಕೇತಿಕಾರ್ಥವೂ ಇಲ್ಲಿದೆ. ಇಂತಹ ಕೃತಿ ರಚನೆಗೆ ಅಂದು ನಡೆದ ಘಟನೆಗಳ ವಾಸ್ತವದ ಅರಿವು ಅಗತ್ಯ. ಅರಿವಿಗೆ ಅಧ್ಯಯನ ಅಗತ್ಯ; ಅಧ್ಯಯನಕ್ಕೆ ತಾತ್ವಿಕ ಗ್ರಹಿಕೆಯ ಆಯಾಮವೂ ಅಗತ್ಯ. ಆಗ ಮಾತ್ರ ಚಾರಿತ್ರಿಕ ಸಂದರ್ಭವನ್ನು ಅಂದು-ಇಂದುಗಳನ್ನು ಒಂದುಗೂಡಿಸಿ ಮರು ಸೃಷ್ಟಿಸಲು ಸಾಧ್ಯ. ಇಂತಹ ಸಾಧ್ಯತೆಯನ್ನು ಸತ್ಯವಾಗಿಸುವುದಕ್ಕೆ ಸಮಕಾಲೀನ ಪ್ರಜ್ಞೆಯೂ ಬೇಕು, ಚಾರಿತ್ರಿಕ ಪ್ರಜ್ಞೆಯೂ ಬೇಕು. ಈ ಉಭಯ ಪ್ರಜ್ಞೆಗಳನ್ನು ಅಂತರ್ಗತ ಮಾಡಿಕೊಂಡ ಅಧ್ಯಯನ ಮತ್ತು ಅರಿವಿನ ಆಯಾಮ ಮಂಜುನಾಥ್ ಅವರಿಗಿದೆ’. ಎಂದಿದ್ದಾರೆ.
©2024 Book Brahma Private Limited.