ಲೇಖಕ ಡಾ. ವೀರಣ್ಣ ರಾಜೂರ ಅವರ ’ ಕರ್ನಾಟಕ ಕೇಸರಿ’ ವೀರರಸ ಪ್ರಧಾನ ಐತಿಹಾಸಿಕ ನಾಟಕವನ್ನು ಒಳಗೊಂಡ ಕೃತಿ. ಕಲಿತನ, ಶುಚಿತ್ವಗಳಿಗೆ ಹೆಸರಾದ ಕಮ್ಮಟದುರ್ಗದ ಕುಮಾರರಾಯನ ಉಜ್ವಲ ಜೀವನಗಾಥೆಯು ನಾಟಕಗಳ ವಸ್ತುವಾಗಿದೆ. ಕತೆಯು ಮೂರು ಅಂಕಗಳಲ್ಲಿ ವಿಸ್ತರಿಸಿಕೊಂಡಿದೆ. ಕುಮಾರರಾಯನ ಜನನ, ವಿದ್ಯಾಭ್ಯಾಸ, ಕಲಿತನ, ಓರಂಗಲ್ಲಿನ ಪ್ತಾಪರುದ್ರನ ಷಡ್ಯಂತ್ರವನ್ನು ಭೇದಿಸಿ ಗೆದ್ದು ಬರುವ ಪ್ರಸಂಗಗಳು ಮೊದಲ ಅಂಕದಲ್ಲಿದ್ದರೆ, ಕುಮಾರರಾಮನ ಕೀರ್ತಿ ವಾರ್ತೆ ಕೇಳಿ ದಿಲ್ಲಿ ಸುಲ್ತಾನನ ಮಗಳು ಅವನನ್ನು ಪ್ರೀತಿಸುವುದು, ಅದು ತನಗೆ ಅಪಮಾನವೆಂದು ತಿಳಿದು ಸುಲ್ತಾನ ಕಮ್ಮಟದುರ್ಗದ ಮೇಲೆ ದಾಳಿ ಮಾಡುವುದು, ಕುಮಾರರಾಮ ಅವನ ಸೈನ್ಯವನ್ನು ಸೋಲಿಸಿ ಓಡುವುದು ಮೊದಲಾದ ಸನ್ನಿವೇಶಗಳು ಎರಡನೆಯ ಅಂಕದಲ್ಲಿ ಜೋಡಣೆಗೊಂಡಿವೆ. ಯುದ್ಧದಲ್ಲಿ ಗೆದ್ದು ಬರುವ ಕುಮಾರರಾಮನನ್ನು ಕಂಪಿಲನ ಕಿರಿಯರಾಣಿ ರತ್ನಾಜಿ ನೋಡಿ ಅವನ ರೂಪಕ್ಕೆ ಮರುಳಾಗುವುದು , ಅವನನ್ನು ಒಲಿಸಿಕೊಳ್ಳಲು ಪ್ರಯತ್ನಿಸುವುದು, ಅದು ಸಾಧ್ಯವಾಗದೇ ಹೋದಾಗ ಅವನ ಮೇಲೆ ಅಪವಾದ ಹೊರಿಸಿ ಮರಣದಂಡನೆಗೆ ಗುರಿಮಾಡುವುದು; ಕುಮಾರರಾಮ ಕೊಲೆಯಾದ ಸುದ್ದಿ ತಿಳಿದು, ದಿಲ್ಲಿ ಸುಲ್ತಾನ ಮತ್ತೆ ಕಮ್ಮಟದುರ್ಗದ ಮೇಲೆ ಮುತ್ತಿಗೆ ಹಾಕುವುದು, ಮಂತ್ರಿ ಬಚ್ಚಿಟ್ಟಿದ ಕುಮಾರರಾಮ ನೆಲಮನೆಯಿಂದ ಹೊರಬಂದು ಸುಲ್ತಾನನ ಸೈನ್ಯವನ್ನು ಸದೆಬಡಿದು ಕಮ್ಮಟದುರ್ಗವನ್ನು ಕಾಪಾಡುವುದು ಈ ನಾಟಕದ ಮುಖ್ಯ ಘಟ್ಟಗಳು’ ಎನ್ನುತ್ತಾರೆ ಲೇಖಕರು.
©2024 Book Brahma Private Limited.