ಕನ್ನಡ ಕಾವ್ಯ, ಅನುವಾದ, ವಿಮರ್ಶೆ, ಹಾಗೂ ನಾಟಕ ರಚನಾಕಾರರಾದ ಡಿ.ಎ ಶಂಕರ್ ವರು ರಚಿಸಿರುವ ನಾಟಕ ’ ಹೈದರಾಲಿ’.
ಈ ನಾಟಕದ ಮುಖ್ಯ ವಸ್ತು ಹೈದರಾಲಿ. ಮೈಸೂರು ವಿಸ್ತರಣೆ, ಅದರ ಸ್ವಾತಂತ್ಯ್ರವನ್ನೇ ತನ್ನ ಗುರಿಯಾಗಿರಿಸಿಕೊಂಡಿದ್ದ ಈತ ಮೈಸೂರು ಇಂಗ್ಲಿಷರ ಕೈ ಸೇರದಂತೆ ಮಾಡಬೇಕು, ತನ್ನ ದೇಶ ಬಿಟ್ಟು ಓಡಿಸಬೇಕು, ಇವೇ ಮೊದಲಾದವು ಹೈದರನ ಗುರಿಯಾಗಿತ್ತು. ಈ ನಾಟಕದ ಪಾತ್ರ ನಿರ್ವಹಣೆ ಹೈದರನ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಬಗೆ, ಸಂಚಿಗೆ ಒಳಸಂಚು ಮಾಡಿದ ಬಗೆಯನ್ನು ತಿಳಿಸುವಂತದ್ದು.
ಹೈದರನ ಕ್ರಿಯೆಗಳ ಕಾಲವಿಸ್ತಾರ, ಸ್ಥಳ ವಿಸ್ತಾರ, ನಾಟಕದುದ್ದಕ್ಕೂ ಚಲಿಸುತ್ತದೆ. ಹೈದರ್ ನಾಯಕನಾದವನು ಹೈದರಾಲಿ ಖಾನ್ ಬಹಾದ್ದೂರ್ ಆಗಿ, ಮುಂದೆ ದಳವಾಯಿ ಮತ್ತು ಸರ್ವಾಧಿಕಾರಿಯಾಗಿ ಸಾವನ್ನಪ್ಪುವವರೆಗೂ ನಡೆಯುವ ಘಟನಾವಳಿಗಳ ಸುತ್ತ ನಾಟಕ ಕ್ರಮಿಸುತ್ತದೆ.
ಇಮ್ಮಡಿ ಕೃಷ್ಣದೇವರಾಜ ಒಡೆಯರ್, ನಂಜರಾಜ ಒಡೆಯರ್, ಬೆಟ್ಟದ ಚಾಮರಾಜ ಒಡೆಯರ್ ಮತ್ತು ಆಸ್ಥಾನಕ್ಕೆ ಹೊಸದಾಗಿ ಆಯ್ಕೆಯಾದ ಬಾಲಕ ಹೈದರ್ ಈ ನಾಲಕ್ಕೂ ರಾಜರ ಕಾಲದ ಜೊತೆ ನಾಟಕ ಸಾಗುತ್ತದೆ.
©2024 Book Brahma Private Limited.