‘ಗುಮಾನಿ’ ಆರ್.ಎಸ್. ಗಿರಿ ಅವರ ಸಾಮಾಜಿಕ ನಾಟಕವಾಗಿದೆ. ಗಿರಿಯವರ ಈ ನಾಟಕವನ್ನು ಕಂಡಾಗ ಅದಕ್ಕಿನ್ನೂ (ಮೊದಲ ಬರೆಹಕ್ಕೆ ಈಗ ಒಂದಿಷ್ಟು ಕಾಯಕಲ್ಪವಾಗಿದ್ದರೂ) ಲವಲವಿಕೆಯಿರುವುದೂ ಯಶಸ್ವಿ ಪ್ರಯೋಗಸಾಧ್ಯತೆಯ ಗುಣಗಳಿರುವುದೂ, ಆಕರ್ಷಕತೆಯಿರುವುದೂ ಗಮನಾರ್ಹವಾಗಿದೆ. ಹಾಗಾಗಿ ರಂಗತಂಡಗಳ/ನಿರ್ದೇಶಕರ ಗಮನವನ್ನು ಇದು ಮತ್ತೆ ಸೆಳೆಯಬಲ್ಲದು ಮತ್ತು ಪ್ರದರ್ಶನ ಕಾಣಬಲ್ಲುದು ಎಂಬ ನಿರೀಕ್ಷೆ ನನ್ನದು. ಯಾವುದೇ ಘೋಷಿತ ಸಾಮಾಜಿಕ ಬದಲಾವಣೆಯ ಅಥವಾ ಚಿಕಿತ್ಸಾ ಮನೋಧರ್ಮದ ನಿಲುವುಗಳ ಹೊರೆಯನ್ನು ಹೊರದೆ ಒಂದು ಕಥೆಯನ್ನು ಆಕರ್ಷಕವಾಗಿ ಹೇಳುವ ಕಡೆಗೆ 'ಗುಮಾನಿ'ಯಲ್ಲಿ ನಾಟಕಕಾರರ ಗಮನವಿದೆ. ಹಳ್ಳಿಯೊಂದರಲ್ಲಿ ನಡೆಯುವ ಹಲವು ತೆರನಾದ ಹುನ್ನಾರಗಳು, ಈರ್ಷೆಗಳು, ಪ್ರಭಾವಬೀರುವಲ್ಲಿನ ಪೈಪೋಟಿಗಳನ್ನು ಎಳೆ ಎಳೆಯಾಗಿ ಚಿತ್ರಿಸುತ್ತ ಅನುಮಾನದ ವ್ಯೂಹವನ್ನು ನಾಟಕ ತೆರೆದಿಡುತ್ತದೆ.
©2024 Book Brahma Private Limited.