ಡೋಹರನೆಂಬೆನೆ ಕಕ್ಕಯ್ಯ-ಕೆಳವರ್ಗಕ್ಕೆ ಸೇರಿದ ವಚನಕಾರನ ಕುರಿತು ರಾ.ಕ. ನಾಯಕ ಅವರು ರಚಿಸಿದ ನಾಟಕವಾಗಿದೆ. ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಭಕ್ತಿ ಆಂದೋಲನದ ಕಾಲ ಒಂದು ಮಹತ್ವದ ಘಟ್ಟ. ಈ ಭಕ್ತಿ ಆಂದೋಲನವು ಭಾರತದಲ್ಲೆಲ್ಲ ಒಂದೇ ಕಾಲಕ್ಕೆ ಒಂದೇ ಬಗೆಯಾಗಿ ವ್ಯಾಪಿಸಲಿಲ್ಲ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮೈದೋರಿತು. ಇದೇ ಸಂದರ್ಭದಲ್ಲಿ ಜಾತಿ ಬಂಧನವು ಬಿಗಿಯಾಗುತ್ತ ಸಮಾಜ ಮನ್ನಣೆ ಪಡೆಯುತ್ತ ಸಾಗುವ ಪ್ರವೃತ್ತಿ ಮುಂದುವರೆದಂತೆ ಇನ್ನೊಂದು ಕಡೆ ಈ ಜಾತಿ ಬಂಧನವನ್ನು ಮೀರಿ ವ್ಯಕ್ತಿ ಚೇತನಗಳು ತಮ್ಮ ಅಭಿಜಾತ ಸ್ವಾತಂತ್ಯ್ರವನ್ನು ಪಡೆಯುತ್ತ ಸಾಗುವ ಉದಾಹರಣೆಗಳು ನಮ್ಮ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಲ್ಲಲ್ಲಿ ಸಿಗುತ್ತವೆ. ಇಂತಹ ಮಹಾನ್ ಚೇತನಗಳಲ್ಲಿ ಒಬ್ಬರು ಮಾದಾರ ಕಕ್ಕಯ್ಯ. ಪ್ರಸ್ತುತ ಕೃತಿಯು ಡೋಹರನೆಂಬೆನೆ ಕಕ್ಕಯ್ಯನ ಕುರಿತು ರಚಿತವಾದ ನಾಟಕವಾಗಿದೆ.
©2024 Book Brahma Private Limited.