ಹಿರಿಯ ಲೇಖಕ ಪ್ರಭಾಕರ ಬಿಳ್ಳೂರ ಅವರ ಸಾಮಾಜಿಕ ರಂಗ ನಾಟಕ ಕೃತಿ-ಚಂದ್ರಪಲ್ಲವಿ. ಸಾಹಿತಿ ಸುನಂದಾ ಎಮ್ಮಿ ಅವರು ಬರೆದ ಮುನ್ನುಡಿಯಲ್ಲಿ ‘ಈ ನಾಟಕವು ಸಮಾಜಕ್ಕೆ ಕೇವಲ ಸಂದೇಶ ನೀಡದು. ಸಮಾಜದ ಅನೇಕ ಸಮಸ್ಯೆಗಳಿಗೆ ಸಮಾಧಾನ, ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಅನ್ಯಾಯಕ್ಕೆ ಅಪಜಯವೂ, ನ್ಯಾಯಕ್ಕೆ ಜಯವೂ ಲಭಿಸುವ ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಸಾಹಿತಿ ಅರ್ಚನಾ ಆರ್ಯ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಚಂದ್ರಪಲ್ಲವಿ ನಾಟಕವು ಸಾಮಾಜಿಕ ಮನಃಶಾಸ್ತ್ರವನ್ನು ಒಳಗೊಂಡಿದೆ. ಉತ್ತರ ಕರ್ನಾಟಕದ ಗಟ್ಟಿ ಭಾಷೆ ಇದೆ. ಎಲ್ಲಾ ಇದ್ದೂ ಒಂಟಿತನದ ಬೇಗೆಯಲ್ಲಿರುವಂತೆ ಕೊನೆಗೆ ಇಹಲೋಕ ತ್ಯಜಿಸುವಲ್ಲಿ ಮುಗಿಯುವ ಈ ನಾಟಕ ಬದಲಾಗುತ್ತಿರುವ ಸಾಮಾಜಿಕ ಸಂದರ್ಭದ ಮೇಲೆ ಬೆಳಕು ಚೆಲ್ಲುತ್ತೆ. ಅನುಭವಕ್ಕೆ ಆಕಾರ ನೀಡುತ್ತದೆ’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಆಗುಂಬೆ ಎಸ್. ನಟರಾಜ್ ಅವರು ‘ಚಂದ್ರಪಲ್ಲವಿ ನಾಟಕದಲ್ಲಿ ಕನ್ನಡ ಲಯ, ಹೃದ್ಯತೆ ಹೀಗೆ ಮಾರ್ಮಿಕವಾದ ಶೈಲಿಗಳು ಆದರ್ಶಪ್ರಾಯವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಹಿತಿ ಆರ್.ಎಸ್. ಜಾಪಗಾವಿ ಅವರು ‘ಆದರ್ಶ ಶಿಕ್ಷಕರಾಗಿದ್ದ ಪ್ರಭಾಕರ ಬಿಳ್ಳೂರ ಅವರು ಚಂದ್ರಪಲ್ಲವಿ ನಾಟಕದಲ್ಲೂ ಆದರ್ಶ ಜೀವನಕ್ಕೆ ಆದ್ಯತೆ ನೀಡಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.