‘ಭಕ್ತಿರಹಸ್ಯ’ ಹಿರಿಯ ಸಾಹಿತಿ ಸಿಂಪಿ ಲಿಂಗಣ್ಣ ಅವರ ನಾಟಕ. ಈ ಕೃತಿಗೆ ಮಧುರಚೆನ್ನ ಅವರು ಮುನ್ನುಡಿ ಬರೆದಿದ್ದಾರೆ. ನಾಟಕವು ಇತಿಹಾಸವಲ್ಲ, ಅದು ಕಾವ್ಯ ಒಂದು ತೋರಿಸಿ ಮತ್ತೊಂದನ್ನು ಕೈಗೆ ಹಚ್ಚುವ ಮಾಟಗಾರ್ತಿಯ ರೀತಿಯದ್ದು ಎನ್ನುತ್ತಾರೆ ಮಧುರಚೆನ್ನ.
ಸಿದ್ದರಾಮನ ಸೋಗು ಭಕ್ತಿಯ ರಹಸ್ಯ ಕತೆ ವಿಶೇಷವಾದದ್ದು. ಪುರಾಣದ ಸಿದ್ಧರಾಮನು ಪುರಾಣಕಾಲಕ್ಕೆ ಅನುಗುಣವಾಗಿದ್ದರೆ, ನಾಟಕದ ಸಿದ್ಧರಾಮನು ಈ ಕಾಲಕ್ಕೆ ಅನುರೂಪವಾದವನು. ಇವನು ಕೋಣೆಯಲ್ಲಿ ಕುಳಿತು ಹರಕುಎಲೆ ಮುದಿಹೂಗಳಿಂದ ಪೂಜಿಸುವ ಪ್ರಪಂಚಿಯಲ್ಲ. ಕೋಣೆಯಿಲ್ಲದ ರಾಜಧಾನಿಯಲ್ಲಿ ಲೆಕ್ಕವಿಲ್ಲದ ಭಂಡಾರವನ್ನು ಮುಚ್ಚಮಾಸದ ಮುನ್ನ ಉಂಡು-ಉಸುರುವ ಸವಿಗಾರನು, ಇಂದಿನವರೆಗೆ ಈ ಕಣ್ಣು ಮೂಡಬೇಕು ಭಕ್ತಿಯ ಬಾಗಿಲು ಆಗ ತೆರೆದೀತು. ಮುತ್ತಿ ನಿಂತ ಗಾಳಿ ಆಗ ಒಳಗೆ ಬಂದೀತು. ಎನ್ನುತ್ತಾ ನಾಟಕದ ಕುತೂಹಲವನ್ನು ಹೆಚ್ಚಿಸುತ್ತಾರೆ. ಈ ಕತೆ ಪುರಾಣಕತೆಯನ್ನೇ ಮುಂದಿಟ್ಟುಕೊಂಡು ಹೊಸಕಾಲಘಟ್ಟವನ್ನು ವಿವರಿಸುತ್ತದೆ.
©2024 Book Brahma Private Limited.