ಡಾ. ಸ್ವಾಮಿರಾವ ಕುಲಕರ್ಣಿ ಅವರ "ಬೆಟ್ಟದ ಮೇಲೊಂದು ಮನೆಯ ಮಾಡಿ" ಎನ್ನುವ ನಾಟಕವನ್ನು ಅವಲೋಕಿಸಿದಾಗ ಇದು 12ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿಯ ಬದುಕು ಸಾಧನೆ ಸಾಹಿತ್ಯ ಆಧಾರಿತ ನಾಟಕ ವಾಗಿದ್ದು,ಉತ್ತರ ಕರ್ನಾಟಕದ ಭಾಷೆಯ ಶೈಲಿ ಈ ನಾಟಕದಲ್ಲಿ ಎದ್ದುಕಾಣುತ್ತದೆ.ಅಕ್ಕಮಹಾದೇವಿ ಯಲ್ಲಿನ ಭಕ್ತಿ ಅಧ್ಯಾತ್ಮಿಕ ಮಾರ್ಗವೇ ನಾಟಕದ ಕೇಂದ್ರಬಿಂದು.ಕೌಶಿಕ ರಾಜನು ಅಕ್ಕನ ಸೌಂದರ್ಯಕ್ಕೆ ಮೋಹಗೊಂಡು ಅವಳನ್ನು ತನ್ನ ವಳಾಗಿಸುವಲ್ಲಿ ಕಾಣುವ ಪ್ರಯತ್ನ ವಿಫಲತೆ ಸುಖದ ಕ್ಷಣಿಕತೆ, ಅರಿಷಡ್ವರ್ಗಗಳನ್ನು ನಿಗ್ರಸಿಕೊಂಡು ವೈರಾಗ್ಯದ ಗಟ್ಟಿ ನಿಲುವನ್ನು ತಾಳಿ ತನ್ನ ಆರಾಧ್ಯ ದೇವನಾದ ಚನ್ನ ಮಲ್ಲಿಕಾರ್ಜುನನ್ನು ನೆನೆಯುತ್ತ ಶಿವಲಿಂಗದಲ್ಲಿ ಇವಳ ಆತ್ಮಲಿಂಗ ಆಗುವುದರೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ನಾಟಕದಲ್ಲಿ ರಾಜನ ಅಧಿಕಾರಿ ಸಾಹಿತ್ಯ ಭಕ್ತಿ ವೈರಾಗ್ಯ ಅಧ್ಯಾತ್ಮ ಮಾರ್ಗ ಅರ್ಥಪೂರ್ಣವಾಗಿ ಮೂಡಿಬಂದಿದೆ. ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಒಟ್ಟು 96 ಪುಟಗಳಿದ್ದು 80 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
©2024 Book Brahma Private Limited.