ರಷ್ಯಾದ ಸಾಹಿತಿ ಟಾಲ್‌ಸ್ಟಾಯ್ ಅವರ ಕತೆ ಆಧರಿಸಿ ಚಂದ್ರಶೇಖರ ಕಂಬಾರರು ’ಬೆಪ್ಪುತಕ್ಕಡಿ ಬೋಳೇಶಂಕರ’ ನಾಟಕ ರಚಿಸಿದ್ದಾರೆ. ಈ ನಾಟಕವು ಸಮಾಜವಾದ, ಸಮಾನತೆ ಮತ್ತು ಶ್ರಮಸಂಸ್ಕೃತಿಯ ಮಹತ್ವವನ್ನು ಪ್ರತಿಪಾದಿಸುತ್ತದೆ. ಶ್ರಮ ಸಂಸ್ಕೃತಿಯ ಮೇಲೆ ನಂಬಿಕೆ ಇರುವವ ಬೋಳೇಶಂಕರ ಸಹಜ ಸಂತನಂತೆ ಬದುಕುತ್ತಿರುತ್ತಾನೆ. ಅವನ ಅಣ್ಣಂದಿರು ನಿರುಪಯುಕ್ತ ಭೂಮಿಯನ್ನು ಕೊಟ್ಟರೂ ಚಿಂತಿಸದೆ ಅದರಲ್ಲಿಯೇ ದುಡಿದು ನೆಮ್ಮದಿಯನ್ನು ಕಾಣುವ ಸ್ವಭಾವದವನು. ಪಿಶಾಚಿಗಳು ಬೋಳೇಶಂಕರನನ್ನು ಸಿಟ್ಟಿಗೇಳಿಸಿ, ಅವನ ಮನಸ್ಸನ್ನು ಪ್ರವೇಶಿಸಲು ನಡೆಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಪಿಶಾಚಿಗಳು, ಬೋಳೇಶಂಕರನಿಗೆ ಹೊಟ್ಟೆನೋವು ವಾಸಿಮಾಡುವ ಬೇರನ್ನು, ಧಾನ್ಯಗಳನ್ನು ಚಿನ್ನವನ್ನಾಗಿ ಮಾಡುವ ಮತ್ತು ಹುಲ್ಲಿನ ಎಸಳುಗಳನ್ನು ಸೈನಿಕರನ್ನಾಗಿ ಮಾಡುವ ಅಪರೂಪದ ಔಷಧ ಮತ್ತು ಮಂತ್ರಗಳನ್ನು ನೀಡುತ್ತವೆ. ರಾಜಕುಮಾರಿಯ ಹೊಟ್ಟೆನೋವು ಗುಣಪಡಿಸಿ, ಅವಳನ್ನು ಮದುವೆಯಾದರೂ, ರಾಜ-ರಾಣಿಯರೂ ಪ್ರತಿದಿನ ದುಡಿಯಲೇಬೇಉ ಎಂಬ ಕರಾರು ಹಾಕುತ್ತಾನೆ.
ಸೈತಾನನು ಬೋಳೇಶಂಕರನ ಅಣ್ಣಂದಿರ ಮನಸ್ಸು ಕೆಡಿಸಿ, ಅವನಿಂದ ಚಿನ್ನ ಮತ್ತು ಸೈನಿಕರನ್ನು ತಯಾರಿಸಿ ದೂರಾಗುತ್ತಾರೆ. ಕೊನೆಗೆ ದುರಾಸೆಯ ಬೆನ್ನುಹತ್ತಿ ನಾಶವಾಗುತ್ತಾರೆ. ಶ್ರಮದ ಮೇಲೆ ಅಪಾರ ನಂಬಿಕೆ ಇರುವ ಬೋಳೇಶಂಕರನ ಪ್ರಜೆಗಳೂ ತಲೆಯಿಂದ ಮಾಡುವ ಕೆಲಸದ ಹಿಂದೆ ಬೀಳದೆ ದುಡಿದ ಮಾಡುವ ಕೆಲಸವೇ ಶ್ರೇಷ್ಠ ಎನ್ನುವ ಮನೋಭಾವ ಹೊಂದಿರುತ್ತಾರೆ.
©2024 Book Brahma Private Limited.