ಸ್ವೆತಾಸ್ಲೋವ್ ರೋರಿಕ್ ಮತ್ತು ದೇವಿಕಾರಾಣಿ ಅವರ ಬದುಕನ್ನು ಆಧರಿಸಿದ ನಾಟಕ- ಬಣ್ಣ ಮೆಚ್ಚಿದವರು. ಈ ನಾಟಕವನ್ನು ಲೇಖಕ ನಟರಾಜ್ ತಲಘಟ್ಟಪುರ ರಚಿಸಿದ್ದಾರೆ. ಸ್ವೆತಾಸ್ಲೋವ್ ರೋರಿಕ್-ದೇವಿಕಾರಾಣಿಯ ಸಂವಾದಗಳಲ್ಲಿ ನಿಸರ್ಗ ಚೆಲುವನ್ನು ಕುರಿತಂತೆ, ನೆಲದ ಬಗೆಗೆ ಅವರ ನಿಷ್ಟೆ, ಭಾರತದ ಬಗ್ಗೆ ರೋರಿಕ್ರ ಅಗಾಧ ಗೌರವ, ಇದೆಲ್ಲವನ್ನೂ ಈ ಕೃತಿಯಲ್ಲಿ ಭಾವತೀವ್ರವಾಗಿ ನಿರೂಪಿಸಲಾಗಿದೆ.
ಮಹಾನ್ ಕಲಾವಿದರಾಗಿದ್ದೂ ಮನುಷ್ಯ ಸ್ವಭಾವದ ಎಲ್ಲ ಓರೆ-ಕೊರೆಗಳೊಡನೆ ಬದುಕಿ, ಅದನ್ನು ಮೀರಲು ನಿರಂತರ ಹೋರಾಟ ನಡೆಸಿದ ಜೀವನ ಅವರದು, ಬದುಕಿನ ದೈನಂದಿನಗಳಾಚೆಯ ಅಮೂರ್ತತೆಯನ್ನೂ ಧ್ಯಾನಿಸುತ್ತಾ ,ನೆಲಕ್ಕೆ ಅಂಟಿಕೊಂಡೇ ಬದುಕಿದ ಈ ಅಪೂರ್ವ ಜೋಡಿಯನ್ನು ಸಮರ್ಥವಾಗಿ ನಾಟಕೀಯವಾಗಿ ಕಟ್ಟಿಕೊಡುವಲ್ಲಿ ನಾಟಕಕಾರರ ಯಶಸ್ಸು ಗಮನಾರ್ಹವಾಗಿದೆ.
ಲೇಖಕ, ವಿಮರ್ಶಕ ಡಾ. ನಟರಾಜ ತಲಘಟ್ಟಪುರ ಅವರು ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರದವರು. ಬೆಂಗಳೂರು ವಿ.ವಿ.ಯಿಂದ ಎಂ.ಎ. (ಕನ್ನಡ-ಚಿನ್ನದ ಪದಕದೊಂದಿಗೆ), ಗಿರೀಶ್ ಕಾರ್ನಾಡರ ನಾಟಕಗಳು - ಒಂದು ಅಧ್ಯಯನ ವಿಷಯವಾಗಿ ಎಂ.ಫಿಲ್, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಸನ ಶಾಸ್ತ್ರ ಪ್ರವೇಶ ಹಾಗೂ ಶಾಸನ ಶಾಸ್ತ್ರ ಪ್ರೌಢ ಡಿಪ್ಲೊಮಾ, ಬೆಂಗಳೂರಿನ ಭಾರತೀಯ ವಿದ್ಯಾಭವನದಿಂದ ಪಿಜಿಡಿಕೆಜೆ (ಕನ್ನಡ ಪತ್ರಿಕೋದ್ಯಮ), ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ ಹಂಪಿ ಆಧುನಿಕ ಕನ್ನಡ ನಾಟಕಗಳ ಸಾಂಸ್ಕೃತಿಕ ಅಧ್ಯಯನ’ (ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ಪಿ.ಲಂಕೇಶ್, ಪ್ರಸನ್ನ, ಎಚ್.ಎಸ್. ಶಿವಪ್ರಕಾಶ್, ಹಾಗೂ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ನಾಟಕಗಳನ್ನು ಅನುಲಕ್ಷಿಸಿ) ವಿಷಯವಾಗಿ ಪಿಎಚ್.ಡಿ. ಪದವೀಧರರು. ...
READ MORE