ಅಭಿಷೇಕ್ ಅಯ್ಯಂಗಾರ್ ಅವರ ’ಬೈ2 ಕಾಫಿ ಮತ್ತು ಮಾಗಡಿ ಡೇಸ್’ ಎರಡು ನಾಟಕಗಳಾಗಿವೆ. ಪ್ರಸ್ತುತ ಸಂಕಲನದಲ್ಲಿ ಎರಡು ನಾಟಕಗಳು ಹೊಸ ಬಗೆಯ ನಿರೂಪಣೆಯಿಂದ ಕೂಡಿದೆ. ಮಾಗಡಿ ಡೇಸ್ ನಾಟಕದ ರಂಗಪ್ರಯೋಗ ಈಗಾಗಲೇ ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದು, ’ಬೈ2 ಕಾಫಿ ಮತ್ತು ಮಾಗಡಿ’ ನಾಟಕದ ವಸ್ತು ಮತ್ತು ನಿರೂಪಣೆ ಕನ್ನಡಕ್ಕೆ ಹೊಸತಾಗಿದೆ. ಇಲ್ಲಿ ಸಾಲುಗಳ ನಡುವೆ ’ ನಾಟಕ’ ಸಾಂದ್ರವಾಗಿ ಅಡಗಿದ್ದು, ಮಾತುಗಳ ನಡುವಿನ ಮೌನಗಳು ಹೊಸ ಅರ್ಥಗಳನ್ನು ಹುಟ್ಟಿಸುವಂತಿವೆ. ’ಮಾಗಡಿ ಡೇಸ್’ ಲೇಖಕರ ರಂಗಭೂಮಿ ಬದುಕನ್ನು ಬದಲಾಯಿಸಿದ ನಾಟಕವಾಗಿದ್ದು, ಬೆಂಗಳೂರಿನಲ್ಲಿ 25 ಕ್ಕೂ ಹೆಚ್ಚು ಪ್ರದರ್ಶನಗಳ ಯಶಸ್ಸನ್ನು ಕಂಡಿತ್ತು. ನಾಟಕ ಬರೆಯುವ ಸಾಕಷ್ಟು ವಿಧಿವಿಧಾನಗಳನ್ನು ಓದಿ , ಅರ್ಥೈಸಿಕೊಂಡು, ಆಧುನಿಕ, ಸರಳ ಕತೆಯನ್ನು ತೀರಾ ಭಾವನಾತ್ಮಕ ಆಗದೆ ಲೋಕದೃಷ್ಟಿಯಲ್ಲಿ ಹೆಣೆಯುವುದರ ಪ್ರಯತ್ನದಲ್ಲಿ ಹುಟ್ಟಿಕೊಂಡ ನಾಟಕವಿದು ಎನ್ನುತ್ತಾರೆ ಲೇಖಕ. ತಾಯಿ ಮಗನ ಸಂಬಂಧದಲ್ಲಿ ಉಂಟಾಗಬಹುದಾದ ಅನೇಕ ವಿಷಯಗಳನ್ನು: ಪಾತ್ರಗಳು ಮುಕ್ತ ಸಂಭಾಷಣೆಯ ಮುಖೇನ ವ್ಯಕ್ತಪಡಿಸಿ, ವಿಭಿನ್ನ ಅಭಿಪ್ರಾಯಗಳನ್ನು ಇಲ್ಲಿ ವಿಶ್ಲೇಷಿಸಿದ್ದಾರೆ.
©2024 Book Brahma Private Limited.