ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಅವರ ‘ಅನ್ವೇಷಕರು’ ಕೃತಿಯು ನಾಟಕ ಸಂಕಲನವಾಗಿದೆ. ಕೃತಿy ಬೆನ್ನುಡಿಯಲ್ಲಿ ‘ಈ ನಾಟಕವು ರಂಗದ ಮೇಲೆ ಯಶಸ್ವಿಯಾಗಿ ಸಾವಿರಾರು ಪ್ರದರ್ಶನ ಕಂಡಂತಹ ನಾಟಕವಾಗಿದೆ. ಈ ನಾಟಕವು ಹೊರಗಿನ ಸಾಮಾಜಿಕ ನೆಲೆಗಳನ್ನು ಅನ್ವೇಷಿಸುತ್ತದೆ. ತನ್ನೊಳಗನ್ನೂ ಹುಡುಕಿಕೊಳ್ಳುವ ವಸ್ತುವಿನ್ಯಾಸದಿಂದ ಎಲ್ಲರ ಗಮನ ಸೆಳೆದ ನಾಟಕ. ಅನ್ವೇಷಣೆ ಎಂಬುದು. ಕಂಬತ್ತಳ್ಳಿ ಅವರ ಬದುಕಿನ ಮೂಲಗುಣವಾಗಿದ್ದು, ಅದು ಅವರ ಬದುಕಿನ ಅಂತರಂಗದಲ್ಲೂ ಬಹಿರಂಗದಲ್ಲೂ ನೆಲೆಯಾಗಿ ಉಳಿದಿರುವುದು ನಮ್ಮ ಪುಣ್ಯವಾಗಿದೆ’ ಎಂದು ಕಾಣಿಸಲಾಗಿದೆ.
ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಮೂಲತಃ ದಾವಣಗೆರೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರಿಗೆ ರಂಗಭೂಮಿಯ ಕಡೆ ಒಲವು. ನಾಟಕಶಾಸ್ತ್ರದಲ್ಲಿ ಬಿ. ಎ ಹಾಗೂ ಕನ್ನಡದಲ್ಲಿ ಎಂ. ಎ ಪದವೀಧರರು. ಕಥೆಗಾರರು. ಅನುವಾದಕರು. ವಿವಿಧ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದಿದ್ದಾರೆ. 1995ರಲ್ಲಿ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಕಥೆಗಾರರಿಗೆ ಮತ್ತು ಪ್ರೇಕ್ಷಕರಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿದ್ದರು. ಕೆಲ ಕಾಲ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ಕೃತಿಗಳು ; ಅನ್ವೇಷಕರು ಮತ್ತು ಇತರ ನಾಟಕಗಳು, ಕಂಪ್ಯೂಟರ್ ಸೇವಕ ಮತ್ತು ಇತರ ನಾಟಕಗಳು, ಮಕ್ಕಳಿಗಾಗಿ ಮತ್ತೆ ಹೇಳಿದ ನಸಿರುದ್ದೀನನ ಕತೆಗಳು, ...
READ MORE