‘ಅಂಬಿಗ ನಿನ್ನ ನಂಬಿದೆ’ ಲೇಖಕ ಡಾ.ಬಸವರಾಜ ಸಬರದ ಅವರು ಅಂಬಿಗರ ಚೌಡಯ್ಯನ ಕುರಿತು ರಚಿಸಿರುವ ನಾಟಕ. ಈ ನಾಟಕಕ್ಕೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ನಟ, ನಿರ್ದೇಶಕ, ನಾಟಕಕಾರರೂ ಆಗಿರುವ ಸಬರದ ಅವರಿಂದ ಮೂಡಿಬಂದಿರುವ ಹೊಸ ನಾಟಕ ಅಂಬಿಗ ನಿನ್ನ ನಂಬಿದೆ ಅಧ್ಯಯನ-ಅಧ್ಯಾಪನ-ಬರವಣಿಗೆಗಳಿಂದ ಸಬರದ ಅವರ ಮನಸ್ಸು ಮಾಗಿದೆ, ಮಾಗಿದ ಮನಸ್ಸು ಸಂಘರ್ಷ ಬಯಸುವುದಿಲ್ಲ ಎನ್ನುವುದು ಈ ನಾಟಕದಲ್ಲಿ ಕಾಣುವುದು. ಪುರುವಂತಿಕೆಯ ಮೂಲಕ ಚೌಡಯ್ಯನವರ ವಿಚಾರಗಳನ್ನು ಪ್ರತಿಪಾದಿಸುವ ದೃಶ್ಯ ಆರಂಭದಲ್ಲೇ ಬಂದು ನಾಟಕಕ್ಕೆ ಜಂಗಮತ್ವ ತಂದುಕೊಟ್ಟಿದೆ. ಅನುಭಾವದಿಂದ ಮುಕ್ತಾಯಗೊಂಡು ಚೌಡಯ್ಯನವರ ಬದುಕನ್ನು ಅನಾವರಣಗೊಳಿಸಿದೆ. ಈ ಮಧ್ಯೆ ಅನೇಕ ಸರಸಮಯ ಘಟನೆಗಳನ್ನು ನೇಯ್ದಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.