ಆ ಲಯ ಈ ಲಯ

Author : ನಟರಾಜ್ ಹೊನ್ನವಳ್ಳಿ

Pages 176

₹ 200.00




Year of Publication: 2024
Published by: MIS READ BOOKS
Address: MIS READ BOOKS Tumkur- 572102 karnataka

Synopsys

‘ಆ ಲಯ ಈ ಲಯ’ ನಟರಾಜ್ ಹೊನ್ನವಳ್ಳಿ ಅವರ ಅನುವಾದಿತ ನಾಟಕ ಸಂಕಲನವಾಗಿದೆ. ಕೃತಿಯ ಮೂಲ ಲೇಖಕ ಲೂಯಿ ನಕೋಸಿ. ಎಚ್. ಎಸ್. ಶಿವಪ್ರಕಾಶ್ ಅವರು ಕೃತಿಯ ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ; ಆಫ್ರಿಕಾದ ಆಧುನಿಕ ನಾಟಕಕಾರರು ಕೇವಲ ಬರವಣಿಗೆಯ ಬಡಗಿಗಳಲ್ಲ; ಅಥವಾ ರಂಗಭೂಮಿಯ ಕಸುಬಿಗರಲ್ಲ. ಬರವಣಿಗೆ ಅವರ ಮಟ್ಟಿಗೆ ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ಒಳಹೊರಗಿನ ದೀರ್ಘಕಾಲೀನ ಹೋರಾಟ, ವೊಲೆ ಶೋಯಿಂಕಾನ ಪ್ರಕಾರ ಆಫ್ರಿಕನ್ ಕಲಾಪ್ರತಿಭೆ ವರ್ತಮಾನದ ಅತ್ಯಂತ ತುರ್ತಿನ ಆದ್ಯತೆಗಳ ನಿರೂಪ. ವರ್ಣಭೇದೀಯ ಹಿಂಸೆ, ಅದರ ವಿರುದ್ಧ ಹೋರಾಟದ ಇಕ್ಕಟ್ಟು-ಬಿಕ್ಕಟ್ಟುಗಳು, ಪರಿಣಾಮವಶಾತ್ ತನಗೊದಗಿಬಂದ ದೇಶಭ್ರಷ್ಟತೆ, ಗಡಿಪಾರು ಇತ್ಯಾದಿ ತಲ್ಲಣಗಳ ಕುದಿಯಲ್ಲಿ, ಕುಂದಣದಲ್ಲಿ ಮೂಡಿಬಂದ ಅಪರೂಪದ ಪ್ರತಿಭೆಯ ಫಲ ಲೂಯಿ ನಕೋಸಿಯ ಭರ್ಜರಿ ನಾಟಕ. ಇದನ್ನು ಕನ್ನಡದ ಖ್ಯಾತ ನಿರ್ದೇಶಕ, ರಂಗಕರ್ಮಿ, ಗೆಳೆಯ ನಟರಾಜ್ ಹೊನ್ನವಳ್ಳಿ ಅವರು ಯಶಸ್ವಿಯಾಗಿ ಕನ್ನಡಕ್ಕೆ ತಂದು ನಾಟಕ ರಚನೆ ಮತ್ತು ರಂಗಭೂಮಿಗೆ ಹೊಸಪ್ರೇರಣೆ ನೀಡಬಲ್ಲ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ನಾಟಕಗಳೆಂದರೆ ಬರೀ ನಾಟಕಗಳು. ಲೂಯಿ ನಕೋಸಿಯ ನಾಟಕಗಳು ಹಾಗಲ್ಲ, ಅದು ಏಕಕಾಲದಲ್ಲಿ ಕಲಾಕೃತಿ ಮಾತ್ರವಲ್ಲದೆ ನೈತಿಕ, ರಾಜಕೀಯ ಮತ್ತು ದಾರ್ಶನಿಕ ಒಡಂಬಡಿಕೆಯೂ ಆಗಿದೆ. ದೊಡ್ಡ ದೊಡ್ಡ ಪ್ರಶಸ್ತಿ ಬಂದ ಕಾರಣದಿಂದಲೇ ಆಡಂಬರದ ಅತಿ ಪ್ರಶಂಸೆಯನ್ನು ನಿರೀಕ್ಷಿಸುವ ಜಾಣ ಜಾಣೆಯರ ಕೃತಿಯಲ್ಲ. ಒಂದು ಚೂರಾದರೂ ನಮ್ಮ ಸಂದರ್ಭದಲ್ಲಿ ಮಾರ್ಗಪಲ್ಲಟವನ್ನು ಮಾಡಬಲ್ಲದು ಈ ಅಪರೂಪದ ನಾಟಕ.

About the Author

ನಟರಾಜ್ ಹೊನ್ನವಳ್ಳಿ

ಖ್ಯಾತ ರಂಗ ನಿರ್ದೇಶಕ, ನಾಟಕಕಾರ ನಟರಾಜ್ ಹೊನ್ನವಳ್ಳಿ ಅವರು ರಂಗಭೂಮಿಯಲ್ಲಿ ಹಲವು ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದ್ದಾರೆ. ಇವರ ಕಲಾಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ವಿಶ್ವ ರಂಗಭೂಮಿ ದಿಗ್ಗಜರಾದ ಬ್ರೆಕ್ ಹಾಗೂ ಚಾಕೊ ಮತ್ತಿತರರ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಂಕೇಶ್ ಅವರ ಬದುಕು, ಶಂಕರ ಮೊಕಾಶಿ ಪುಣೇಕರ್ ಅವರ ನಟ ನಾರಾಯಣಿ, ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್, ಮಾಸ್ತಿಯವರ ಸುಬ್ಬಣ್ಣ ಕಾದಂಬರಿಗಳನ್ನು ರಂಗರೂಪಕ್ಕೆ ತಂದಿದ್ದಾರೆ. ನಲವತ್ತು ನಾಟಕ, ನಲವತ್ತು ಕಥೆಗಳನ್ನು ರಂಗಕ್ಕೆ ಅಳವಡಿಸಿದ್ದಾರೆ. ಕನ್ನಡದ ಸಣ್ಣ ಕಥೆಗಳನ್ನು ರಂಗಕ್ಕೆ ತಂದ ಯಶಸ್ವಿ ನಿರ್ದೇಶಕರೆನಿಸಿಕೊಂಡಿದ್ದಾರೆ. ನೀನಾಸಂ ರಂಗಶಿಕ್ಷಣದ ...

READ MORE

Related Books