About the Author

’ಪರ್ವತವಾಣಿ’ ಎಂದು ಜನಪ್ರಿಯರಾಗಿದ್ದ ಕನ್ನಡದ ನಾಟಕಕಾರ, ನಟ, ನಿರ್ದೇಶಕ ಪರ್ವತ ವಾಡಿ ನರಸಿಂಗರಾವ್.  1911ರ ಸೆಪ್ಟಂಬರ್‌ 2 ತಮಿಳುನಾಡಿನ ಹತ್ತಿರದ ಹಳ್ಳಿ ಪರ್ವತವಾಡಿಯಲ್ಲಿ ಜನಿಸಿದರು. ಇವರ ಕಂಚಿನ ಕಂಠವನ್ನು ಕೇಳಿದ ವಿ. ಕೃ. ಗೋಕಾಕ್‌ ನೀಡಿದ ಸೂಚನೆಯ ಮೇರೆಗೆ ಪರ್ವತವಾಡಿಯವರು ’ಪರ್ವತವಾಣಿ’ ಆದರು. ಪರ್ವತವಾಣಿಯವರು ತಾರಾಮಂಡಲವೆಂಬ ಹವ್ಯಾಸಿ ನಾಟಕತಂಡವನ್ನು, ಆನಂತರ ನಂಕಪ್ನಿ ಎಂಬ ನಾಟಕತಂಡವನ್ನು ಕಟ್ಟಿ ಸಾವಿರಾರು ನಾಟಕಪ್ರಯೋಗಗಳನ್ನು ಮಾಡಿದರು. ಸ್ವತಃ ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಎನ್ನುವ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ. ಅವರು ಸುಮಾರು 83 ನಾಟಕಗಳನ್ನು ರಚಿಸಿದ್ದು ಮೊದಲ ನಾಟಕ ’ಮಾಲತಿ’. ಹಣಹದ್ದು, ಬಹಾದ್ದೂರ ಗಂಡು. ’ಮುಕುತಿ ಮೂಗುತಿ, ಸತಿ ಸಾವಿತ್ರಿ, ಉಂಡಾಡಿನಗುಂಡ, ವಿಪರ್ಯಾಸ, ಕಿಚಕ, ಮಧ್ಯಪಾನ, ಹಗ್ಗದ ಕೊನೆ’ ಅವರ ಜನಮೆಚ್ಚುಗೆ ಪಾತ್ರವಾದ ನಾಟಕಗಳು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರುಷತ್ತಿನ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಕರ್ನಾಟಕ ನಾಟಕ ಅಕಾಡೆಮಿ ’ಕನ್ನಡ ರಂಗಭೂಮಿಯ ಪರ್ವತವಾಣಿ’ ಎಂಬ ಆಭಿನಂದನಾ ಗ್ರಂಥವನ್ನು ಅರ್ಪಿಸಿದೆ. ’ನನ್ನಕಥೆ’ ಎಂಬ ಆತ್ಮಕಥೆಯನ್ನು ಬರೆದಿದ್ಧಾರೆ. 1994 ಮಾರ್ಚ್‌ 17 ರಂದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಾ ನಿಧನರಾದರು. 

 

ಪರ್ವತವಾಣಿ

(02 Sep 1911-05 Mar 1994)