ಲೇಖಕ ನಾಗರಾಜ ಕೋಟೆ ಅವರು ಕಿರು ತೆರೆ, ಚಲನಚಿತ್ರ ನಟರು. ವೃತ್ತಿರಂಗ ಭೂಮಿ ಹಾಗೂ ಹವ್ಯಾಸ ಕಲಾವಿದರು. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದವರು. ಬಾನಾಡಿ ಎಂಬ ಚಲನಚಿತ್ರಕ್ಕೆ ಇವರು ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರರೆದಿದ್ದು, ಇದು, 10ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಂತರಾಷ್ಟ್ರೀ ಚಿತ್ರೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯದಿಂದ ‘ಅತ್ತುತ್ಯಮ ಮಕ್ಕಳ ಚಿತ್ರ ಪ್ರಶಸ್ತಿ ಪಡೆದಿದೆ.
ಕೃತಿಗಳು: ಹತ್ತು ಮುತ್ತು (ಮಕ್ಕಳ 10 ನೀತಿಯುಕ್ತ ನಾಟಕಗಳು),
ಪ್ರಶಸ್ತಿ-ಪುರಸ್ಕಾರಗಳು: ಚನ್ನರಾಯಪ್ಪಣ್ಣದ ಯುವಕರ ಬಳಗದಿಂದ "ಹಾಸ್ಯಚಾಣಕ್ಯ" ಪ್ರಶಸ್ತಿ, ಮೈಸೂರಿನ ದೇ.ಜ.ಗೌ.ಅಕಾಡಮಿಯಿಂದ ಹಾಸ್ಯಶ್ರೀ ಪ್ರಶಸ್ತಿ, ಹೈದರಾಬಾದ್-ಕರ್ನಾಟಕ ಸಾಂಸ್ಕೃತಿ ವೇದಿಕೆ ಹೂಸಪೇಟೆದಿಂದ ಬೀಚಿ ಪ್ರಶಸ್ತಿ, ರಂಗಬಳಗ ಶಿರಸಿ ಇವರಿಂದ ರಂಗಶ್ರೀ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಆಕಾಡೆಮಿಯಿಂದ ಮರದ ಮೇಲಿನ ನಾಟಕಕ್ಕೆ ವಿಶೇಷ ಸುವರ್ಣ ಕರ್ನಾಟಕ ಪ್ರಶಸ್ತಿ, ಶಿವಮೊಗ್ಗ ಹಾರನಹಳ್ಳಿ ಶ್ರೀ ಮಠದಿಂದ ಕಲಾರತ್ನ ಪ್ರಶಸ್ತಿ ಸೇರಿದಂತೆ ಇತರೆ ಗೌರವಗಳು ಲಭಿಸಿವೆ.