About the Author

ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಲಿಂಗದೇವರು ಹಳೆಮನೆ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹಾಲುಗೊಣದವರು. 1949ರ ಮಾರ್ಚ್‌ 6ರಂದು ಜನಿಸಿದ ಅವರು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಮೈಸೂರು ಕರ್ನಾಟಕ ನಾಟಕ ರಂಗಾಯಣದ ನಿರ್ದೇಶಕರಾಗಿದ್ದ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಹಾಮಾನಾ ಪ್ರಶಸ್ತಿ, ಕೆ.ವಿ. ಸುಬ್ಬಣ್ಣ ನಾಟಕ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು.

ಚಿಕ್ಕದೇವಭೂಪ, ಹೈದರ್, ಅಂತೆಂಬರ ಗಂಡ, ತಸ್ಕರ, ಶಾಪ, ಡಾ.ಬೇಥೂನ್‌, ಮಟಾಶ್‌ರಾಜ, ಧರ್ಮಪುರಿಯ ದೇವದಾಸ, ಮದರ್ ಕರೇಜ್‌, ಮನುಷ್ಯ ಅಂದ್ರೆ ಮನುಷ್ಯನೇ (ನಾಟಕಗಳು), ಕನ್ನಡ ಕಲಿ, ಭಾಷೆ, ಭಾಷೆ ಮತ್ತು ಸಾಮಾನ್ಯ ಮನುಷ್ಯ, (ಭಾಷಾ ವಿಜ್ಞಾನ), ಪ್ರಸ್ತುತ, ಸಂದರ್ಭ, ನಿಲುವು, ಆಶಯ, ಸಂವಾದ, ರೂಪ ರೂಪಗಳನ್ನುದಾಟಿ (ಅಂಕಣ ಸಾಹಿತ್ಯ) ಪ್ರಕಟಿತ ಕೃತಿಗಳು.

 

ಲಿಂಗದೇವರು ಹಳೆಮನೆ

(06 Mar 1949-08 Jun 2011)

ABOUT THE AUTHOR