About the Author

ರಂಗಕರ್ಮಿ, ಬರಹಗಾರ್ತಿ ಎಸ್. ಮಾಲತಿ ಅವರು ಜನಿಸಿದ್ದು 1952 ಮೇ 1ರಂದು ಶಿವಮೊಗ್ಗದಲ್ಲಿ. ತಾಯಿ ಉಮಾ ಶೇಷಗಿರಿ ಪೈ, ತಂದೆ ಶೇಷಗಿರಿ ಪೈ. ದೆಹಲಿಯ ಎನ್.ಎಸ್.ಡಿ ಗರಡಿಯಲ್ಲಿ ಬೆಳೆದುಬಂದವರು. 

ಇವರು ಬರೆದ ನಾಟಕಗಳೆಂದರೆ ಎರಡು ಕಿರು ನಾಟಕಗಳು, ಶೀಮ ಕಥಾನಕ, ದಲಿತಲೋಕ. ಇವರು ಅನುವಾದಿಸಿದ ನಾಟಕಗಳು ಜನತೆಯ ಶತ್ರು, ರೊಷೊಮನ್, ಒಂದು ಪಯಣದ ಕಥೆ, ಹೊಸದಿಕ್ಕು. ಇವರ ಬರಹಗಳು ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಕಾವ್ಯದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕ್ಷಣಿಕವಲ್ಲದ ಕ್ಷಣಗಳು, ಹೇಳಬೇಕೆನಿಸಿದ್ದು, ನನ್ನ ಪ್ರಿಯತಮನ ಬಾಳು, ಭಾವಕೋಶ ಇವರ ಪ್ರಮುಖ ಕವನ ಸಂಕಲನಗಳು.

ಸುಮಾರು 42ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿರುವ ಇವರು ಸ್ವತಃ ನಾಟಕ, ಸಾಕ್ಷ್ಯಚಿತ್ರ, ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಬಿನಯಿಸಿದ್ದಾರೆ. ಇವರಿಗೆ ಕರ್ನಾಟಕ ಲೇಖಕಿಯರ ಸಂಘದ ಇಂದಿರಾ ವಾಣಿರಾವ್ ದತ್ತಿ ಬಹುಮಾನ, ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ, ಪೇಜಾವರ ಸದಾಶಿವರಾವ್ ಕಾವ್ಯ ಪ್ರಶಸ್ತಿ ದೊರೆತಿದೆ. 

ಎಸ್. ಮಾಲತಿ

(01 May 1952-02 Apr 2019)