ಶ್ರೀನಿವಾಸ ವಿ. ಸುತ್ರಾವೆ ಮೂಲತಃ ದಾವಣಗೆರೆಯವರು, ತಂದೆ ಎಸ್. ವೆಂಕಟಗಿರಿ ರಾವ್, ತಾಯಿ- ಎಸ್. ಶಾಂತಾಬಾಯಿ. ದಾವಣಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಡಿ.ಆರ್.ಎಂ ಕಾಲೇಜಿನಲ್ಲಿ ಪಿಯೂಸಿ ಪೂರ್ಣಗೊಳಿಸಿದರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ ಪೂರ್ಣಗೊಳಿಸಿದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದ ಅವರು ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಉದುರುವ ಎಲೆಗಳು, ಚೆರಿ ತೋಟ, ಆಯ್ದ ರಷ್ಯನ್ ಕಥೆಗಳು, ಚೆಕಾಫನ ಎರಡು ನಾಟಕಗಳು, ಸಿಂಹ ಮತ್ತು ರತ್ನ ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.