ನೃತ್ಯ-ಗೀತ-ನಾಟಕ

Author : ವಿಜಯಾ ಸುಬ್ಬರಾಜ್

Pages 442

₹ 225.00




Year of Publication: 2002
Published by: ಜ್ಞಾನೋದಯ ಪ್ರಕಾಶನ
Address: ನಂ.133, ಶಾರದ ಕಾಲೋನಿ, ಕೆ.ಎಚ್.ಬಿ.ಸಿ.ಎಸ್ ಲೇಔಟ್, 3ನೇ ಸ್ಟೇಜ್, 4ನೇ ಬ್ಲಾಕ್, ಬಸವೇಶ್ವರನಗರ, ಬೆಂಗಳೂರು-79,
Phone: 3489944

Synopsys

ಕನ್ನಡ ಸಾಹಿತ್ಯ ಪರಿಷತ್ತು ಸಾಮೂಹಿಕ ಸಂಶೋಧನಾತ್ಮಕ ವ್ಯವಸಾಯಕ್ಕೆ ಗ್ರಂಥ ಪ್ರಕಟಣೆ ರೂಪದಲ್ಲಿ ಅಭಿವ್ಯಕ್ತಿಯನ್ನು ಕೊಡುವ ತ್ರೈವಾರ್ಷಿಕ ಯೋಜನೆಯ ಕಾರ್ಯಕ್ರಮವೊಂದನ್ನು ಹಾಕಿಕೊಂಡಿತ್ತು. ಇಂಥ ಉದ್ದೇಶದಿಂದ ಪ್ರಕಟಿಸುತ್ತಿರುವ ಸಂಪ್ರಬಂಧಗಳು ಸಾಲಿನಲ್ಲಿ ‘ಕನ್ನಡದಲ್ಲಿ ಗೀತನಾಟಕಗಳು’- ಒಂದು ಅಧ್ಯಯನ ಎಂಬ ಸಂಶೋಧನ ಗ್ರಂಥ ಡಾ.ವಿಜಯಾ ಸುಬ್ಬರಾಜ್ ಅವರದು. ಈ ಅಧ್ಯಯನದಲ್ಲಿ ವಿಶೇಷವಾಗಿ ಡಾ. ಪು.ತಿ.ನ ಮತ್ತು ಡಾ. ಶಿವರಾಮ ಕಾರಂತ ಅವರ ಕೃತಿಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ನಾಟ್ಯ ಅಥವಾ ನಾಟಕ-ಸಂಗೀತ ನೃತ್ಯ, ಚಿತ್ರ, ಶಿಲ್ಪಗಳ ರೂಪದಲ್ಲಿ ದೃಶ್ಯ ಮತ್ತು ಶ್ರವ್ಯಾಂಗಗಳನ್ನು ಒಳಗೊಂಡ ಅನೇಕ ಪ್ರಭೇದಗಳಾಗಿ ಕವಲೊಡೆದು, ಪದ್ಯ ನಾಟಕ, ಗದ್ಯ ನಾಟಕ, ನೃತ್ಯ ನಾಟಕ, ಗೀತ ನಾಟಕ ಇತ್ಯಾದಿ ಸಂಪ್ರದಾಯಗಳಾಗಿ ಮುಂದುವರೆದವು.

ಕಾಲ ಮತ್ತು ಜನಾಭಿರುಚಿಗೆ ಅನುಗುಣವಾಗಿ ನಾಟ್ಯಾಭಿವ್ಯಕ್ತಿಯ ಮಾಧ್ಯಮ ಪದ್ಯವೋ, ನೃತ್ಯ ಗೀತವೋ ಆಗಿ ಜನ ಮನ್ನಣೆಯನ್ನು ಪಡೆಯುತ್ತಲೇ ಬಂದಿದೆ. ನಾಟಕದಲ್ಲಿ ರಮಣೀಯತೆ, ರಂಜಕತೆಯ ಅಂಶಗಳನ್ನು ಉಳಿಸಿಕೊಂಡು ಬುದ್ಧಿಗಿಂತ ಭಾವಸ್ಪಂದನೆಗಳಿಗೆ ಹೆಚ್ಚು ಅವಕಾಶ ಕಲ್ಪಿಸಿಕೊಡುವ, ಪ್ರೇಕ್ಷಣೀಯ ಪರಿಣಾಮಗಳನ್ನು ಹೆಚ್ಚು ನಿರೀಕ್ಷಿಸುವ ಗೀತನಾಟಕಗಳ ರಚನೆ ನಡೆಯುತ್ತಿರುವುದು ಪ್ರಶಂಸಾರ್ಹ ಸಂಗತಿ.  ಈ ಗೀತನಾಟಕಗಳು ತೀರಾ ಇತ್ತೀಚಿನ ನಾಟ್ಯ ರೂಪಗಳೆನಿಸಿದರೂ ಇವುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರೇರಣೆ ನೀಡಿರುವ, ಪ್ರಾಚೀನ ನಾಟ್ಯ ಸಂಪ್ರದಾಯಗಳು ಪಾಶ್ಚಿಮಾತ್ಯ ಸಂಗೀತ ನಾಟ್ಯ ಸಂಪ್ರದಾಯಗಳೂ ಸಂಖ್ಯೆಯಲ್ಲಿ ಅಪಾರವಾಗಿದೆ. ಡಾ. ವಿಜಯಾ ಸುಬ್ಬರಾಜ್ ಅವರು ಪ್ರಸ್ತುತ ಸಂಪ್ರಬಂಧದಲ್ಲಿ ಗೀತನಾಟಕಗಳ ಬಗೆಗೆ ಕಂಡುಬಂದಿರುವ ಉಪೇಕ್ಷೆಗಳ ಕಾರಣಗಳನ್ನು ತಿಳಿಸುವುದರೊಡನೆ, ಕನ್ನಡದಲ್ಲಿ ಅವುಗಳ ಬೆಳವಣಿಗೆಯನ್ನೂ ಅವುಗಳಿಗೆ ದೊರೆತ ಪ್ರೇರಣೆ ಪ್ರಭಾವಗಳ ಹಿನ್ನೆಲೆಯನ್ನೂ ಗುರುತಿಸಿದ್ದಾರೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books