ಲೇಖಕ ಡಾ ಶ್ರೀ ರಾಮ ಇಟ್ಟಣ್ಣವರ ಸಂಪಾದಿಸಿರುವ ನಾಟಕ ಕೃತಿ- ʼಕಂದಗಲ್ಲ ಸ್ಟೃತಿʼ . ಪ್ರಸಿದ್ಧ ನಾಟಕಕಾರ ಕಂದಗಲ್ಲ ಹನುಮಂತರಾಯರು ಕಂದಗಲ್ಲದವರಾಗಿದ್ದು, ರಂಗಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದರು. ನಾಟಕ ಸಾಹಿತ್ಯ ಕುರಿತ ಉಪನ್ಯಾಸ, ವಿಚಾರ ಸಂಕಿರಣಗಳು ಕಂದಗಲ್ಲ ವೇದಿಕೆಯ ಮೂಲಕ ನಡೆಯುತ್ತಿದ್ದು, ಆ ವಿಚಾರಗಳನ್ನು ಇಲ್ಲಿ ಭಿನ್ನವಾಗಿ ಕಟ್ಟಿಕೊಡಲಾಗಿದೆ. ರಂಗವೇದಿಕೆಯ ಕನಸುಗಳಾದ; ರಂಗಮಂದಿರ ನಿರ್ಮಾಣ, ಕಂದಗಲ್ಲರ ನಾಟಕಗಳ ಮುದ್ದಣ, ನಾಟಕಗಳ ಪ್ರದರ್ಶನ , ರಂಗ ತರಬೇತಿ ಶಾಲೆ, ತನ್ಮೂಲಕ ರಂಗಭೂಮಿಯ ಅಧ್ಯಯನ, ಅಧ್ಯಾಪನೆ- ಇವುಗಳ ಕುರಿತ ವಿಚಾರವನ್ನು ಈ ಕೃತಿಯಲ್ಲಿ ಕಾಣಬಹುದು.
ಶ್ರೀಕೃಷ್ಣ ಪಾರಿಜಾತ- ಒಂದು ಅಧ್ಯಯನ ಎಂಬ ವಿಷಯದ ಮೇಲೆ ಪಿಎಚ್.ಡಿ . ಪದವಿ ಪಡೆದಿರುವ ಶ್ರೀರಾಮ ಇಟ್ಟಣ್ಣವರ ಅವರು ಬೀಳಗಿಯ ಶ್ರೀಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಬಯಲಾಟ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಇಟ್ಟಣ್ಣವರ ಅವರು ಬಯಲಾಟ-ಕೃಷ್ಣ ಪಾರಿಜಾತ ಹಾಗೂ ಜಾನಪದ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಹೊಳಿಸಾಲ ಬಳ್ಳಿ; ಗಾಲಿ ಉಳ್ಳತೈತಿ; ನೂರು ಶಿಶುಗೀತೆಗಳು; ಹಾಡುಣು ಬಾಪ್ರೇಮದ ಪಾಡಾ; ಹೊತ್ತು ಮೂಡುವ ಸಮಯ (ಕಾವ್ಯ), ಪಾರಿಜಾತದವರು (ನಾಟಕ), ಜನಪದ ಪಶುವೈದ್ಯ ಬೀಳಗಿ ಸಿದ್ಧಪ್ಪ; ಕೊಣ್ಣೂರ ಕರಿಸಿದ್ದೇಶ್ವರ ದೇವಸ್ಥಾನ (ಜಾನಪದೀಯ) ಹಲಗಲಿ-ಗ್ರಾಮ ಚಾನಪದ (ಅಧ್ಯಯನ), ಲಾವಣಿ: ಸಣ್ಣಾಟ (ಸಂಶೋಧನೆ) ತಟ್ಟಿ ಚಿನ್ನ-ಸಣ್ಣಾಟ; ...
READ MORE