ಏಕಾಂಕ ನಾಟಕಗಳು

Author : ಶಿವರಾಮ ಕಾರಂತ

Pages 126




Year of Publication: 1933
Published by: ಶಿವರಾಮ ಕಾರಂತ
Address: ಕೋಟ (ದ.ಕ ಜಿಲ್ಲೆ)

Synopsys

ಡಾ. ಕೆ. ಶಿವರಾಮ ಕಾರಂತರು ಬರೆದ ಏಕಾಂಕ ನಾಟಕಗಳ ಸಂಕಲನವಿದು. ಇಲ್ಲಿ ನಾರದ ಗರ್ವಭಂಗ, ಹಣೆಬರಹ, ಕಟ್ಟೆಪುರಾಣ ಹೀಗೆ ಮೂರು ಏಕಾಂಕ ನಾಟಕಗಳಿವೆ. ‘ನಾರದ ಗರ್ವಭಂಗ’ವು ಆತನನ್ನು ವಿಡಂಬನಾತ್ಮಕವಾಗಿ ಹಾಗೂ ವ್ಯಂಗ್ಯವಾಗಿ ಆತನಿಗೂ ಶಿಕ್ಷೆ ತಪ್ಪುವುದಿಲ್ಲ ಎಂಬ ಮಾರ್ಮಿಕ ಸಂದೇಶ ನೀಡಲಾಗಿದೆ. ಪೌರಾಣಿಕ ವ್ಯಕ್ತಿ ನಾರದ ಮುನಿಯನ್ನು ಭೂಲೋಕದ ಭೂಲೋಕದ ಮದನರಾಯ ಎಂಬುವನ ಪತ್ನಿ ಮಹಾಪತಿವ್ರತೆ ನರ್ಮದೆಯನ್ನು ಕಂಡುಬಾರೆಂದು ವಿಷ್ಣುವು ಕಳುಹಿಸುತ್ತಾನೆ. ಆದರೆ, ಜಗಳನ್ನು ಹಚ್ಚುವಲ್ಲಿ ತನ್ನನ್ನೂ ಮೀರಿಸುವ ಜನರಿದ್ದಾರೆಂದು ತಿಳಿದು ಆತ ಅಚ್ಚರಿಗೊಳ್ಳುತ್ತಾನೆ. ಭೂಲೋಕದ ಜನರು ಈ ನಾರದನನ್ನು ಹುಚ್ಚ ಎಂದು ತರ್ಕಿಸುತ್ತಾರೆ. . ಇಂತಹ ಜನರಿಂದ ಹೇಗಾದರೂ ಮಾಡಿ ತಪ್ಪಿಸಿಕೊಂಡರೆ ಸಾಕು ಎಂದು ನಾರದ ಭೂಲೋಕವನ್ನು ಬಿಟ್ಟು ಹೋಗುತ್ತಾನೆ. ಇಲ್ಲಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. 

‘ಹಣೆಬರೆಹ’ ನಾಟಕದಲ್ಲಿ ನಿರಾಶವಾದಿಯೊಬ್ಬನ ಚಿತ್ರಣವಿದೆ. ಎಲ್ಲದಕ್ಕೂ ತನ್ನ ಹಣೆಬರಹವೇ ಕಾರಣ ಎಂಬುದು ಆತನ ವಾದ. ಇಂತಹವರಿಗೆ ಪಾಠ ಕಲಿಸುವ ರೀತಿಯಲ್ಲಿ ನಾಟಕದ ವಸ್ತುವನ್ನು ಸನ್ನಿವೇಶಗಳ ಮೂಲಕ ಹೆಣೆಯಲಾಗಿದೆ. ಕಟ್ಟೆಪುರಾಣ-ಇವರ ಮತ್ತೊಂದು ಸಾಮಾಜಿಕ ನಾಟಕ.  ದಕ್ಷಿಣ ಕನ್ನಡ ಭಾಷೆಯಲ್ಲಿ ಶಬ್ದಗಳ ಪ್ರಯೋಗವಿದ್ದರೂ ಓದಿಸಿಕೊಂಡು ಹೋಗುತ್ತದೆ. ಊರಿನ ಜನರೆಲ್ಲ ಸೇರಿ ಅವರಿವರ ಸುದ್ದಿಗಳನ್ನು ಎತ್ತಿಕೊಂಡು ಬಾಯಿಗೆ ಬಂದಂತೆ ಟೀಕಿಸುವುದು ಇಲ್ಲಿಯ ಕಥಾ ವಸ್ತು.

ಪಂಜೆ ಮಂಗೇಶರಾಯರು ಕೃತಿಗೆ ಮುನ್ನುಡಿ ಬರೆದು ‘ಹಳ್ಳಿಯವರ ಜನಜೀವನವನ್ನು ಸಮರ್ಥವಾಗಿ ಚಿತ್ರಿಸುವ ಹಾಗೂ ಚಿಕ್ಕ ಚಿಕ್ಕ ನಾಟಕಗಳನ್ನು ಬರೆಯುವ ಕನ್ನಡ ವಾಙ್ಮಯ ಸ್ವಾಮಿಗಳು, ಕನ್ನಡ ಭಾಷಾ ಪ್ರೇಮಿಗಳು ದಕ್ಷಿಣ ಕನ್ನಡದ ಇಂತಹವರಲ್ಲಿ ಪ್ರಥಮ ವರ್ಗಕ್ಕೆ ಸೇರತಕ್ವವರು ಕೋಟದ ಶಿವರಾಮ ಕಾರಂತ’ ಎಂದು ಪ್ರಶಂಸಿಸಿದ್ದಾರೆ.

 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books