ಲೇಖಕಿ ಎಸ್. ಮಾಲತಿ ಅವರ ನಾಟಕ ಕೃತಿ-ದಲಿತ ಲೋಕ. ಶತ ಶತಮಾನಗಳಿಂದ ದೈಹಿಕ ಹಾಗೂ ಮಾನಸಿಕ ಹಿಂಸೆಗೊಳಗಾಗುತ್ತಲೇ ಬಂದಿದ್ದ ಬಹು ಜನರು ಒಗ್ಗಟ್ಟಾಗಿ ಹೋರಾಡುವ ಮೂಲಕ ಸಾಮಾಜಿಕ ನ್ಯಾಯ ಪಡೆಯಬೇಕಿದೆ. ಇದಕ್ಕೆ ಶಿಕ್ಷಣ, ಸಂಘಟನೆ ಮೂಲಕ ಹೋರಾಟದ ದಿಕ್ಕನ್ನು ನಿರ್ಧರಿಸಬೇಕಿದೆ. ಬಾಹ್ಯ ಜಗತ್ಯಿನ ಶತ್ರುಗಳೊಂದಿಗೆ ಹೋರಾಟ ಮಾತ್ರವಲ್ಲ ದಲಿತ ಲೋಕದ ಒಳ ಜಗತ್ತಿನ ಶತ್ರುಗಳೊಂದಿಗೂ ಹೋರಾಟದ ಅಗತ್ಯವಿದೆ. ಈ ಎಚ್ಚರಿಕೆಯನ್ನು ನೀಡುವ ‘ದಲಿತ ಲೋಕ’ ನಾಟಕವು, ದಲಿತರ ಅಸ್ತಿತ್ವವನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಬಗ್ಗೆ ಹೇಳುತ್ತದೆ.
©2024 Book Brahma Private Limited.